Job Description: * 2022 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ನಾಮನಿರ್ದೇಶನಗೊಂಡಿದ್ದಾರೆ. ಹಾಲಿ ಹಾಗೂ ಮಾಜಿ ಯುರೋಪಿಯನ್ ರಾಜಕಾರಣಿಗಳು ನಾರ್ವೇಜಿಯನ್ ನೊಬೆಲ್ ಸಮಿತಿಯು ಶಿಫಾರಸ್ಸು ಮಾಡಿದೆ, ಈ ನಾಮನಿರ್ದೇಶನ ಪ್ರಕ್ರಿಯೆಯನ್ನು ಈ ಮಾರ್ಚ್. 31 ರವರೆಗೆ ವಿಸ್ತರಿಸಿದೆ. * 2022 ರ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮನಿರ್ದೇಶನ ವಿಧಾನವನ್ನು ಪುನಃ ಆರಂಭಿಸಲು ಹಾಗೂ ಮರುಪರಿಶೀಲನೆಗೆ ರಾಜಕಾರಣಿಗಳು ಸಮಿತಿಗೆ ಕರೆ ನೀಡಿದ್ದಾರೆ. ಇದೇ ಅಕ್ಟೋಬರ್ 3 ರಿಂದ 10 ರವರೆಗೆ ಈ ವರ್ಷದ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗುತ್ತದೆ ಎಂದಿದ್ದಾರೆ. 2022 ರ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಸುಮಾರು 251 ವ್ಯಕ್ತಿಗಳು ಹಾಗೂ 92 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. * ನೊಬೆಲ್ ಶಾಂತಿ ಪ್ರಶಸ್ತಿಯು ಸ್ವೀಡಿಷ್ ಕೈಗಾರಿಕೋದ್ಯಮಿ, ಸಂಶೋಧಕ ಹಾಗೂ ಶಸ್ತ್ರಾಸ್ತ್ರಗಳ ತಯಾರಕ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಿಂದ ಸ್ಥಾಪನೆ ಮಾಡಲಾಗಿರುವ '5' ನೊಬೆಲ್ ಪ್ರಶಸ್ತಿಗಳಲ್ಲಿ ಇದು ಕೂಡ ಒಂದಾಗಿದೆ. * ಈ ನೊಬೆಲ್ ಶಾಂತಿ ಪ್ರಶಸ್ತಿಯು ಇತಿಹಾಸದ ಬಹುಪಾಲು ಅನೇಕ ವಿವಾದಗಳ ವಿಷಯವಾಗಿದೆ. 2021 ರ ಬಹುಮಾನವನ್ನು ಮಾರಿಯಾ ರೆಸ್ಸಾ ಹಾಗೂ ಡಿಮಿಟ್ರಿ ಮುರಾಟೋವ್ ಅವರಿಗೆ ನೀಡಲಾಗಿದೆ.