Job Description: * ಪ್ರಸ್ತುತ ಬಿಹಾರ ರಾಜ್ಯ ಪೊಲೀಸ್ ಇಲಾಖೆಯು ಇದೇ ಮೊದಲ ಬಾರಿಗೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳಿಗೆ ತೃತೀಯಲಿಂಗಿಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನವನ್ನು ಕೈಗೊಂಡಿದೆ. * ಪ್ರಸ್ತುತ ಬಿಹಾರ್ ರಾಜ್ಯದಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳ ವೇಳಾಪಟ್ಟಿಯಲ್ಲಿ ಲಿಂಗಾಯತ ಅಥವಾ ತೃತೀಯಲಿಂಗಿಗಳನ್ನು ನೇಮಕ ಮಾಡಿಕೊಳ್ಳಲು ಸಾಮಾನ್ಯ ಆಡಳಿತ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. * ಈ ಆದೇಶದ ಪ್ರಕಾರ ಬಿಹಾರ ಪೊಲೀಸ್‌'ನಲ್ಲಿ ಮುಂಬರುವ ಕಾನ್ಸ್‌ ಟೇಬಲ್ ಅಥವಾ ಇನ್‌ ಸ್ಪೆಕ್ಟರ್ ನೇಮಕಾತಿಗಳಲ್ಲಿ ಪ್ರತಿ 500 ಹುದ್ದೆಗಳಿಗೆ ಒಬ್ಬ ಟ್ರಾನ್ಸ್‌ ಜೆಂಡರ್‌'ನ್ನು ನೇರ ನೇಮಕಾತಿ ಮಾಡಿಕೊಳ್ಳಾಗುತ್ತದೆ ಎಂದು ತಿಳಿಸಿದ್ದಾರೆ. ಇತ್ತೀಚಿಗೆ ಮುಖ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಗೃಹ ಹಾಗೂ ಸಾಮಾನ್ಯ ಆಡಳಿತ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. * ಬಿಹಾರ್ ರಾಜ್ಯದ ಮುಂದಿನ ಹಂತದ ನೇಮಕಾತಿಯಲ್ಲಿ 51 ಟ್ರಾನ್ಸ್ ಜೆಂಡರ್'ಗಳನ್ನು ನೇರವಾಗಿ ಪೊಲೀಸ್ ಇಲಾಖೆಯ ಸೇವೆಯಲ್ಲಿ ನೇಮಕ ಮಾಡಿಕೊಳ್ಳಲಗುತ್ತದೆ ಎಂದು ತಿಳಿಸಿದ್ದಾರೆ. ಅವರಲ್ಲಿ 41 ಕಾನ್‌ ಸ್ಟೆಬಲ್ ಹುದ್ದೆಗಳು, ಮತ್ತು 10 ಇನ್‌ ಸ್ಪೆಕ್ಟರ್ ಹುದ್ದೆಗಳನ್ನೂ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ. * ಪ್ರಸ್ತುತ ಬಿಹಾರ್ ರಾಜ್ಯದ ಪೊಲೀಸ್ ಇಲಾಖೆಯ ಪ್ರತಿ 500 ನೇಮಕಾತಿಯಲ್ಲಿ ಒಬ್ಬ ತೃತೀಯಲಿಂಗಿಯನ್ನುನೇಮಕ ಮಾಡಿಕೊಳ್ಳಾಗುತ್ತದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಹುದ್ದೆಗೆ ಅರ್ಹ ತೃತೀಯಲಿಂಗಿ ಲಭ್ಯವಾಗದಿದ್ದರೆ, ಅವರ ಬದಲಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಯಾವುದೇ ಅರ್ಹ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. * ಬಿಹಾರ ಪೋಲೀಸ್ ಇಲಾಖೆ ಇದೊಂದು ಭಾರತದ ಬಿಹಾರ ರಾಜ್ಯದ ಕಾನೂನು ಜಾರಿ ಸಂಸ್ಥೆಯಾಗಿದೆ, ಇಲಾಖೆಯು ತನ್ನ ಪ್ರಧಾನ ಕಛೇರಿಯನ್ನು ಬಿಹಾರ್ ನ ಪಾಟ್ನಾದಲ್ಲಿ ಹೊಂದಿದೆ. * ಪ್ರಸ್ತುತ ಎಸ್‌ಕೆ ಸಿಂಘಾಲ್ ಅವರು ಬಿಹಾರ ಪೊಲೀಸ್‌ನ ಡಿಜಿಪಿ ಯಾಗಿದ್ದಾರೆ, ಇವರು 1988 ರ ಬ್ಯಾಚ್‌ನ IPS ಅಧಿಕಾರಿಯಾಗಿದ್ದಾರೆ.