* ಚಂದ್ರಯಾನ-3 ಯಶಸ್ವಿ ಬಾಹ್ಯಾಕಾಶ ಸಾಧನೆಗಾಗಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಅಂತರಾಷ್ಟ್ರೀಯ ಆಸ್ಟ್ರೋನಾಟಿಕಲ್ ಫೆಡರೇಶನ್ (ಐಎಎಫ್) ಪ್ರತಿಷ್ಠಿತ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ಸೋಮವಾರ (ಅ.14) ಸ್ವೀಕರಿಸಿದ್ದಾರೆ. * ಇಟಲಿಯ ಮಿಲನ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.* ಚಂದ್ರಯಾನ-3 ಅನ್ನು ಕಳೆದ ವರ್ಷ ಜುಲೈ 14 ರಂದು ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಯಿತು ಮತ್ತು ಇದು ಆಗಸ್ಟ್ 23 ರಂದು ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡಿಂಗ್ ಮಾಡಿತ್ತು. ಇಸ್ರೋದ ಯಶಸ್ವಿ ಚಂದ್ರಯಾನ-3 ಮಿಷನ್ ಅನ್ನು ಗುರುತಿಸಿ, ಇದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ಮಿಷನ್ ಆಗುವ ಮೂಲಕ ಚಂದ್ರನ ಅನ್ವೇಷಣೆಯಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿತು. * ಕಳೆದ ವರ್ಷ, ಸ್ಪೇಸ್‌ಎಕ್ಸ್‌ನ ಮುಖ್ಯಸ್ಥರಾಗಿ ಗಗನಯಾತ್ರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಎಲೋನ್ ಮಸ್ಕ್ ಅವರಿಗೆ ಐಎಎಫ್ ಈ ಪ್ರಶಸ್ತಿಯನ್ನು ನೀಡಿತು.