* ಅಮೆರಿಕದ ಖಾಸಗಿ ಕಂಪನಿಯೊಂದು ಚಂದ್ರನ ಅಂಗಳದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ನೌಕೆಯನ್ನು ನೆಲೆಯೂರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.* ಕಳೆದ 50 ವರ್ಷಗಳ ಇತಿಹಾಸದಲ್ಲಿ ಚಂದ್ರನ ಅಂಗಳವನ್ನು ತಲುಪಿಸಿದ ಅಮೆರಿಕದ ಮೊದಲ ಬಾಹ್ಯಾಕಾಶ ನೌಕೆಯೂ ಇದಾಗಿದೆ. ಈ ಮೊದಲು ಭಾರತ, ರಷ್ಯಾ ಮತ್ತು ಅಮೆರಿಕ ಮತ್ತು ಚೀನಾ ಈ ಸಾಧನೆಯನ್ನು ಮಾಡಿದ್ದವು. ಈ ಹಿಂದೆ ಅಮೆರಿಕದ 'ಅಪೊಲೊ 17' ಬಾಹ್ಯಾಕಾಶ ನೌಕೆಯು 1972ರಲ್ಲಿ ಚಂದ್ರನ ಅಂಗಳವನ್ನು ತಲುಪಿತ್ತು.* ಹೋಸ್ಟನ್ ಮೂಲದ ಖಾಸಗಿ ಕಂಪನಿ ಉಡಾಯಿಸಿದ ಅಮೆರಿಕದ ಮೊಟ್ಟಮೊದಲ ಖಾಸಗಿ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. * ಅಮೆರಿಕಾ ಖಾಸಗಿ ಸಂಸ್ಥೆ ಇನುಷಿಟಿವ್ ಮಷಿನ್ಸ್‌ ನಿರ್ಮಿಸಿರುವ 'ಒಡಿಸ್ಸಿಯಸ್' ಎಂದು ಹೆಸರಿಸಲಾಗಿರುವ ಲ್ಯಾಂಡರ್ ಅಮೆರಿಕದ ಸ್ಥಳೀಯ ಕಾಲಮಾನ ಫೆಬ್ರುವರಿ 22 ರಂದು (ಗುರುವಾರ) ಸಂಜೆ 6.30ಕ್ಕೆ ಚಂದ್ರನ ಅಂಗಳವನ್ನು ತಲುಪಿತು. ದಕ್ಷಿಣ ಧ್ರುವದ ಬಳಿಯೇ ಈ ಲ್ಯಾಂಡರ್‌ ಅನ್ನು ಇಳಿಸಲಾಗಿದೆ ಎಂದು ವರದಿ ತಿಳಿಸಿದೆ.