* ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಯಲ್ಲಿ 13 ಭಾರಿ (1999 ರಿಂದ 2011 ರ ವರೆಗೆ) ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಹೆಗ್ಗಳಿಕೆಯ 'ಬಲರಾಮ' ಆನೆ (67) ಅನಾರೋಗ್ಯದಿಂದ ಮೇ 7 (ಭಾನುವಾರ) ರಂದು ಮೃತಪಟ್ಟಿದೆ.* ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶುವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡಿದ್ದು, ಬಲರಾಮನ ಗಂಟಲಿನಲ್ಲಿ ಹುಣ್ಣಾಗಿದ್ದರಿಂದ ಆಹಾರ ಸೇವಿಸಲು ನೀರು ಕುಡಿಯಲಾಗದೆ ಅಸ್ವಸ್ಥಗೊಂಡಿದ್ದು , ಪಶು ವೈದ್ಯರು ಸಾಕಷ್ಟು ಚಿಕಿತ್ಸೆಯನ್ನ ನೀಡಿದ್ದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೆ ಬಲರಾಮ ಆನೆ ಕೊನೆಯುಸಿರೆಳೆದಿದೆ.