Job Description: * ಅಮೆರಿಕಾದ ಬಲಪಂಥೀಯ ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ “ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಂ” ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸಲಾಗಿದೆ. ಬುಧವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪುರಸ್ಕಾರವನ್ನು ಘೋಷಿಸಿದರು.* ಚಾರ್ಲಿ ಕಿರ್ಕ ಅವರ ಜನ್ಮದಿನದಂದು ಈ ಗೌರವ ಘೋಷಿತವಾಗಿದ್ದು, ಅವರು ಅಮೆರಿಕಾದ ಓರೆಮ್ ನಗರದ ಉತಾಹ ವ್ಯಾಲಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ “ದಿ ಅಮೆರಿಕನ್ ಕಮ್‌ಬ್ಯಾಕ್ ಟೂರ್” ಕಾರ್ಯಕ್ರಮದ ವೇಳೆ ಗುಂಡಿಕ್ಕಿ ಹತ್ಯೆಗೀಡಾದರು. ಸ್ಥಳೀಯ ಪೊಲೀಸರ ಪ್ರಕಾರ, ಕಿರ್ಕ ಅವರನ್ನು ದೀರ್ಘದೂರದಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಮತ್ತು ಈ ಪ್ರಕರಣವನ್ನು “ಸಕ್ರಿಯ ತನಿಖೆ”ಯಾಗಿ ಪರಿಗಣಿಸಲಾಗಿದೆ.* ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಯೋಧನನ್ನು ನಾವು ಸದಾ ಸ್ಮರಿಸುತ್ತೇವೆ. ಮುಂದಿನ ತಲೆಮಾರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ ಕಿರ್ಕ ಅವರ ಕೊಡುಗೆ ಅಮರ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. * ಈ ಪ್ರಶಸ್ತಿ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿ ಮತ್ತು ಭದ್ರತೆಗೆ ಅಪಾರ ಕೊಡುಗೆ ನೀಡಿದವರಿಗೆ ನೀಡಲಾಗುತ್ತದೆ. * 1963ರಲ್ಲಿ ಅಧ್ಯಕ್ಷ ಜಾನ್ ಎಫ್. ಕೆನಡಿ ಈ ಪುರಸ್ಕಾರವನ್ನು ಸ್ಥಾಪಿಸಿದ್ದರು. * ಇದು ಅಮೆರಿಕಾದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದು.