* ವಿಶ್ವ ಆನೆಗಳ ದಿನ ಆಗಸ್ಟ್ 12 ರಂದು ಆಚರಿಸಲಾಗುತ್ತದೆ.ಕರ್ನಾಟಕ  ರಾಜ್ಯ ದೇಶದಲ್ಲೇ ಅತಿ ಹೆಚ್ಚು ಆನೆಗಳನ್ನುಹೊಂದಿದ ರಾಜ್ಯವಾಗಿ ಹೊರಹೊಮ್ಮಿದೆ.ರಾಜ್ಯದಲ್ಲಿ 6395 ಕಾಡಾನೆಗಳಿದ್ದು,ಈ ಪೈಕಿ ಕಳೆದ ವರ್ಷಗಳಲ್ಲಿ 51 ಕಾಡಾನೆಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿವೆ.ರಾಜ್ಯದಲ್ಲಿ ಈ ಅವಧಿಯಲ್ಲಿ 294 ಕಾಡಾನೆಗಳು ಮೃತಪಟ್ಟಿದವು,ಇವುಗಳ ಪೈಕಿ 51 ಸಾವು ಅಸ್ವಾಭಾವಿಕವಾಗಿದೆ ಎಂಬುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.* ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 2023 ರ ಆನೆ ಗಣತಿ ಪ್ರಕಾರ ಕರ್ನಾಟಕ ಅತಿ ಹೆಚ್ಚು ಕಾಡಾನೆಗಳನ್ನು ಹೊಂದಿದೆ.* ಕೇಂಬ್ರಿಜ್ಡ್ ಯೂನಿವರ್ಸಿಟಿ ಪ್ರೆಸ ಪ್ರಕಟಿಸಿದ ಆರ್ ಸುಕುಮಾರ ಅವರು ಬರೆದಿರುವ "ದಿ ಏಷ್ಯನ್ ಎಲಿಪೆಂಟ ಇಕಾಲಜಿ ಅಂಡ್ ಮ್ಯಾನೇಜ್ಮೆಂಟ್ " ಪುಸ್ತಕದನ್ವಯ,ನೈಸರ್ಗಿಕವಾಗಿ ಕಾಡಾನೆಗಳ ಸಾವಿನ ಪ್ರಮಾಣವು ವರ್ಷಕ್ಕೆ ಸರಾಸರಿ 1 .8 %ರಷ್ಟಿದೆ ಎಂದು ಹೇಳಿದ್ದಾರೆ.ಕಾಡಾನೆಗಳ ಸಾವು ತಡೆಗಟ್ಟುವ ಪ್ರಕರಣ ಕ್ರಮಗಳು:* ಜಲಸಂಪನ್ಮೂಲಗಳ ಅಭಿವೃದ್ಧಿ * ನೀರಿನ ಲಭ್ಯತೆ * ಕೆರೆಗಳ ನಿರ್ಮಾಣ * ವನ್ಯ ಜೀವಿಗಳ ಆವಸ್ಥಾನವನ್ನು ಅಭಿವೃದ್ಧಿಗೊಳಿಸುವುದು* ಹುಲ್ಲುಗಾವಲು ಸಂರಕ್ಷಣೆ * ಆನೆಗಳ ಅಸ್ವಾಭಾವಿಕ ಸಾವಿಗೆ ಕಾರಣವಾಗುತ್ತಿರುವವರವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತಿದೆ.* ಗಣತಿ ವಿಧಾನದಲ್ಲಿ ಕೈಗೊಂಡ ಬದಲಾವಣೆಯಿಂದ ಆನೆಗಳ ಸಂಖ್ಯೆಯನ್ನು 2017 ರ ಜನಗಣತಿ ಜೊತೆ ಹೋಲಿಕೆ ಮಾಡಲಾಗುವುದು,ಎಂದು ಅಧಿಕಾರಿಗಳು ಹೇಳಿದ್ದಾರೆ.* ಅಖಿಲ ಭಾರತ ಸಿಂಕ್ರೋನಸ್ ಗಣತಿಯ ಅಂದಾಜಿನ ಪ್ರಕಾರ,ಭಾರತದಲ್ಲಿ 18,255 ರಿಂದ 26,645  ಆನೆಗಳಿರಬಹುದು.* ಭಾರತದಲ್ಲಿ ಇರುವ ಕಾಡಾನೆಗಳ ಸಂಖ್ಯೆ:22,446 * ಕರ್ನಾಕಟದಲ್ಲಿ ಇರುವ ಆನೆಗಳ ಸಂಖ್ಯೆ:6,013 * ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇರುವ ಆನೆಗಳ ಸಂಖ್ಯೆ:11,934 * ಕರ್ನಾಟಕ ಆನೆಗಳ ಸಂಖ್ಯೆಗಳಲ್ಲಿ ಅಗ್ರ ಸ್ಥಾನದಲ್ಲಿದೆ.