Job Description: * ಭಾರತೀಯ ಇಸ್ರೊ ಬೃಹತ್‌ ಎಲ್‌ವಿಎಂ3–ಎಂ3 ರಾಕೆಟ್‌ ಬ್ರಿಟನ್‌ ಮೂಲದ ಒನ್‌ವೆಬ್‌ ಗ್ರೂಪ್‌ ಸಂಸ್ಥೆಯ 36 ಉಪಗ್ರಹಗಳನ್ನು ಭಾನುವಾರ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು.* ಒನ್ ವೆಬ್ ಇಂಡಿಯಾ -2 ಮಿಷನ್‍ನ ಭಾಗವಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-3 ರಾಕೆಟ್ ಅನ್ನು ಕಕ್ಷೆಗೆ ಹಾರಿಸಿದೆ. ಬ್ರಿಟನ್ ಮೂಲದ ಒನ್‍ವೆಬ್ ಗ್ರೂಪ್‍ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರವಾದ ಲಾಂಚ್ ವೆಹಿಕಲ್ ಮಾರ್ಕ್ – 3 ಉಡಾವಣಾ ನೌಕೆ ನಭಕ್ಕೆ ಹಾರಿತು.* ಈ ವರ್ಷ ಇಸ್ರೋ ನಡೆಸಿದ 2ನೇ ರಾಕೆಟ್ ಉಡಾವಣೆ ಇದಾಗಿದೆ. ಈ ಉಡಾವಣೆಯೊಂದಿಗೆ ಒನ್‍ವೆಬ್ ತನ್ನ 616 ಉಪಗ್ರಹಗಳನ್ನು ಕಕ್ಷೆಯಲ್ಲಿ ಹೊಂದಿದೆ. ಈ ಮಿಷನ್ ಭಾರತದಿಂದ ಉಡಾವಣೆ ಮಾಡುತ್ತಿರುವ ಒನ್‍ವೆಬ್‍ನ ಎರಡನೇ ಉಪಗ್ರಹವಾಗಿದೆ.