* ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರೋ ಚಂಡಮಾರುತ ತೀವ್ರಗೊಳ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಬಾಂಗ್ಲಾದೇಶದ ಕರಾವಳಿಯನ್ನ ಕ್ರಾಸ್ ಮಾಡಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.* ಒಮ್ಮೆ ಇದು ಸಂಪೂರ್ಣ ಚಂಡಮಾರುತವಾಗಿ ತೀವ್ರ ಸ್ವರೂಪ ಪಡೆದ ನಂತರ ಇದಕ್ಕೆ ʻಮಿಧಿಲಿʼ ಎಂದು ಹೆಸರಿಡಲಾಗುತ್ತೆʼ* ಓಡಿಶಾದ ಕರಾವಳಿ ಭಾಗದಿಂದ 150 ಕಿ.ಮೀ ವೇಗದಲ್ಲಿ ಹಾದುಹೋಗುವ ಈ ಚಂಡಮಾರುತದಿಂದ ರಾಜ್ಯದ ಮೇಲೆ ಯಾವುದೇ ಗಂಭೀರ ಪರಿಣಾಮ ಆಗುವುದಿಲ್ಲ ಎಂದು IMD ವಿಜ್ಞಾನಿ ಉಮಾಶಂಕರ್‌ ದಾಸ್ ಅವರು ತಿಳಿಸಿದ್ದಾರೆ.* ಮಾಲ್ಡಿನ್ಸ್ ಈ ಚಂಡಮಾರುತಕ್ಕೆ ಮಿಥಿಲಿ ಎಂದು ಹೆಸರಿಸಿದ್ದು, ಇದರ ಅರ್ಥ ದೊಡ್ಡ ಅಥವಾ ಬೃಹತ್ ಮರ ಎಂದಾಗುತ್ತದೆ.