* ಸರಕು ಸಾಗಣೆ ಸೇವೆಯನ್ನು (courier services ) ಒದಗಿಸುವ ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್ (Blue Dart Express) ಕಂಪನಿಯು ತನ್ನ ‘ಡಾರ್ಟ್ ಪ್ಲಸ್‌’ (Dart Plus) ಅನ್ನು ‘ಭಾರತ್ ಡಾರ್ಟ್'(Blue Dart) ಎಂದು ಸೆಪ್ಟೆಂಬರ್ 13 ರಂದು ಮರುನಾಮಕರಣ ಮಾಡಿದೆ. * “ದೇಶದ ಉದ್ದಗಲಕ್ಕೂ ನಾವು ಸೇವೆ ಸಲ್ಲಿಸುವುದನ್ನು ಮುಂದುವರಿಸುವುದರಿಂದ ಈ ಮರುಬ್ರಾಂಡಿಂಗ್ ನಮಗೆ ರೋಮಾಂಚನಕಾರಿ ರೂಪಾಂತರವನ್ನು ಪ್ರತಿನಿಧಿಸುತ್ತದೆ ಎಂದು ಬ್ಲೂ ಡಾರ್ಟ್ ನ ವ್ಯವಸ್ಥಾಪಕ ನಿರ್ದೇಶಕ ಬಾಲ್ಫೋರ್ ಮ್ಯಾನುಯೆಲ್ ಅವರು ತಿಳಿಸಿದ್ದಾರೆ.* ಜಿ20 ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿದ್ದ ನೇಮ್‌ಪ್ಲೇಟ್‌ನಲ್ಲಿ ಇಂಡಿಯಾ ಬದಲಿಗೆ ಭಾರತ್ ಎಂದು ಬರೆಯಲಾಗಿದ್ದು, ಇಂಡಿಯಾ ಬದಲಿಗೆ ಭಾರತ್ ಎಂಬ ಹೆಸರನ್ನು ಅಧಿಕೃತಗೊಳಿಸಲಾಗುತ್ತಿದೆ ಇದರ ಜೊತೆಗೆ ಬ್ಲೂ ಡಾರ್ಟ್ ಕೂಡ ತನ್ನ ಸೇವೆಯನ್ನು ಭಾರತ್ ಡಾರ್ಟ್ ಎಂದು ಮರು ಬ್ರ್ಯಾಂಡಿಂಗ್ ಮಾಡಿಕೊಂಡಿದೆ.