*ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ನಾಯಕ ಕರ್ಪುರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಗೌರವ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ.*ಈ ಪಶಸ್ತಿಯನ್ನು ಕರ್ಪುರಿ ಅವರ (ಮರಣೋತ್ತರ) ಜನ್ಮಶತಮಾನೋತ್ಸವಕ್ಕೆ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಭಾರತ ರತ್ನ' ನೀಡಿ ಗೌರವಿಸಿದರು.*ಸಮಾಜದ ದುರ್ಬಲ ಏಳಿಗೆಗಾಗಿ ಕರ್ಪುರಿ ಠಾಕೂರ್ ನಡೆಸಿದ ನಿರಂತರ ಪ್ರಯತ್ನಗಳಿಗೆ ಭಾರತ ರತ್ನ ಗೌರವವು ಪ್ರಮಾಣಪತ್ರವಾಗಿದೆ ಎಂದು ನರೇಂದ್ರ ಮೋದಿಯವರು ವಿಶ್ಲೇಸಿದ್ದಾರೆ.*ಕರ್ಪುರಿ ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು 1952 ರಲ್ಲಿ ಸಮಾಜವಾದಿ ಪಕ್ಷದ ನಾಯಕರಾಗಿ ಬಿಹಾರ ವಿಧಾನಸಭೆ ಯನ್ನು ಪ್ರವೇಶಿಸಿದ್ದರು. ಚುನಾವಣೆಯಲ್ಲಿ ಒಮ್ಮೆಯೂ ಸೋಲದ ಅವರು ಉಪಮುಖ್ಯಮಂತ್ರಿ ಹುದ್ದೆಗೇರಿದರು, ಅಲ್ಲದೆ ಬಿಹಾರದ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ ಯಾಗಿ ಆಯ್ಕೆಯಾದರು.*1970 ರ ದಶಕಡ್ ಕೊನೆಯಲ್ಲಿ ಮುಂಗೇರಿ ಲಾಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡುವ ಪ್ರಯತ್ನವನ್ನು ಕರ್ಪುರಿ ಮಾಡಿದ್ದರು.