➤ ನವದೆಹಲಿ: ದೇಶದ ರಾಜಧಾನಿಯ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (08-03-2026) ದೆಹಲಿ ಮೆಟ್ರೋದ ಎರಡು ಹೊಸ ಕಾರಿಡಾರ್‌ಗಳನ್ನು ಉದ್ಘಾಟಿಸುವುದರೊಂದಿಗೆ, ಭಾರತದ ಮೊಟ್ಟಮೊದಲ 'ರಿಂಗ್ ಮೆಟ್ರೋ' (Ring Metro) ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. - ಪಿಂಕ್ ಲೈನ್ ವಿಸ್ತರಣೆ: ಮಜ್ಜಿಸ್ ಪಾರ್ಕ್‌ - ಮೌಜಪುರ - ಬಾಬರ್‌ಪುರ ನಡುವಿನ 12.3 ಕಿ.ಮೀ ಮಾರ್ಗ ಲೋಕಾರ್ಪಣೆ.- ರಿಂಗ್ ಮೆಟ್ರೋ ಹೆಗ್ಗಳಿಕೆ: ಈ ವಿಸ್ತರಣೆಯೊಂದಿಗೆ ಪಿಂಕ್ ಲೈನ್ ಒಟ್ಟು 71.56 ಕಿ.ಮೀ ಉದ್ದದ ವೃತ್ತಾಕಾರದ ಮಾರ್ಗವಾಗಿ (Ring Road ಮಾದರಿ) ಬದಲಾಗಿದೆ.- ಮೆಜೆಂತಾ ಲೈನ್ ಅಭಿವೃದ್ಧಿ: ದೀಪಾಲಿ ಚೌಕದಿಂದ ಮಜ್ಜಿಸ್ ಪಾರ್ಕ್ ವರೆಗಿನ 9.9 ಕಿ.ಮೀ ಹೊಸ ಮಾರ್ಗಕ್ಕೆ ಚಾಲನೆ.➤ ರಿಂಗ್ ಮೆಟ್ರೋ: ದೆಹಲಿ ಮೆಟ್ರೋದ 'ಪಿಂಕ್ ಲೈನ್' (Pink Line) ಈಗ ಭಾರತದ ಸುದೀರ್ಘವಾದ ಮೆಟ್ರೋ ಮಾರ್ಗಗಳಲ್ಲಿ ಒಂದಾಗಿದೆ. ಮಜ್ಜಿಸ್ ಪಾರ್ಕ್‌ನಿಂದ ಮೌಜಪುರವರೆಗಿನ ಹೊಸ ಸಂಪರ್ಕವು ಇಡೀ ನಗರವನ್ನು ಒಂದು ಪೂರ್ಣ ವೃತ್ತದಂತೆ (Circle) ಸುತ್ತುವರಿಯುತ್ತದೆ. ಈ ರಿಂಗ್ ಮೆಟ್ರೋ 71.56 ಕಿ.ಮೀ ಉದ್ದವಿದ್ದು, ನಗರದ ಎಲ್ಲಾ ಪ್ರಮುಖ ಭಾಗಗಳನ್ನು ಕನೆಕ್ಟ್ ಮಾಡುತ್ತದೆ ಈ ಕಾರಿಡಾರ್‌ನಲ್ಲಿ ಯಮುನಾ ನದಿಯ ಮೇಲೆ ಹೊಸ ಮೆಟ್ರೋ ಸೇತುವೆಯನ್ನು ನಿರ್ಮಿಸಲಾಗಿದೆ.ಕೆಳಗೆ ವಾಹನ ಸಂಚಾರಕ್ಕಾಗಿ ಫ್ಲೈ ಓವರ್ ಮತ್ತು ಅದರ ಮೇಲೆ ಮೆಟ್ರೋ ರೈಲು ಸಂಚರಿಸುವ ಅತ್ಯಾಧುನಿಕ 'ಡಬಲ್ ಡೆಕ್ಕರ್' ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ. ಮಜ್ಜಿಸ್ ಪಾರ್ಕ್, ಬುರಾರಿ, ಝರೋಡಾ ಮಜ್ರಾ, ಜಗತ್‌ಪುರ-ವಜೀರಾಬಾದ್, ಸೂರ್‌ಘಾಟ್, ಖಜುರಿ ಖಾಸ್ ಮತ್ತು ಭಜನ್‌ಪುರ ಸೇರಿದಂತೆ ಒಟ್ಟು 8 ಹೊಸ ಎಲಿವೇಟೆಡ್ ನಿಲ್ದಾಣಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ➤ ಮೆಜೆಂತಾ ಲೈನ್ (Magenta Line) ವಿಸ್ತರಣೆ: ರಿಂಗ್ ಮೆಟ್ರೋ ಜೊತೆಗೆ, ದೀಪಾಲಿ ಚೌಕದಿಂದ ಮಜ್ಜಿಸ್ ಪಾರ್ಕ್ ಸಂಪರ್ಕಿಸುವ 9.9 ಕಿ.ಮೀ ಉದ್ದದ ಮೆಜೆಂತಾ ಲೈನ್ ಕಾರಿಡಾರ್ ಅನ್ನು ಕೂಡ ಉದ್ಘಾಟಿಸಲಾಗಿದೆ. ಇದರಿಂದಾಗಿ ಮೆಜೆಂತಾ ಲೈನ್‌ನ ಒಟ್ಟು ಉದ್ದ 49 ಕಿ.ಮೀಗೆ ಏರಿಕೆಯಾಗಿದೆ. ಇದು ಪಶ್ಚಿಮ ದೆಹಲಿ ಮತ್ತು ಉತ್ತರ ದೆಹಲಿಯ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.