* ಭಾರತದ ಅದ್ಯಕ್ಷತೆಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘ(ಎಸ್‌ಸಿಒ) ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿರುದ್ಧ ಗಡಿಯಾಚೆ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನವನ್ನ ವಿದೇಶಾಂಗ ಸಚಿವರಾದ ಜೈಶಂಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.* ಸಂವಿಧಾನದ 370ನೇ ವಿಧಿ ತೆಗೆದುಹಾಕಿರುವ ಬಗ್ಗೆ ಪಾಕಿಸ್ತಾನ ಆಕ್ಷೇಪ ಎತ್ತಿರುವುದನ್ನು ಪ್ರಸ್ತಾಪಿಸಿದ್ದು, ಆ ವಿಧಿ ಈಗ ಚರಿತ್ರೆ ಸೇರಿದೆ, ಕಾಶ್ಮೀರದಲ್ಲಿ ವಿವಾದ ಉಳಿದಿರುವ ಪ್ರಶ್ನೆಯೆಂದರೆ, ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಯಾವಾಗ ಭಾರತಕ್ಕೆ ಒಪ್ಪಿಸುತ್ತೀರಿ ಎನ್ನುವುದು ತಿಳಿಸಿದ್ದಾರೆ.