* ಭಾರತದ ಶ್ರೇಷ್ಠ ಶಾಸ್ತ್ರೀಯ ನೃತ್ಯ ಪರಂಪರೆಯ ಪ್ರಮುಖ ಪ್ರತಿನಿಧಿಗಳಲ್ಲಿ ಒಬ್ಬರಾದ ಕುಮಾರಿ ಕಮಲಾ 91 ನೇ ವಯಸ್ಸಿನಲ್ಲಿ ಅವರು ಅಮೆರಿಕಾದಲ್ಲಿ ನಿಧನರಾದರು.ಭಾರತನಾಟ್ಯ ನೃತ್ಯವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ಮೊದಲ ಪೀಳಿಗೆಯ ಕಲಾವಿದೆಯರಲ್ಲಿ ಕುಮಾರಿ ಕಮಲಾ ಪ್ರಮುಖರು.* ಅವರು ಬಾಲ ವಯಸ್ಸಿನಲ್ಲೇ ನೃತ್ಯ ಲೋಕಕ್ಕೆ ಕಾಲಿಟ್ಟಿದ್ದು, ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಭಾರತನಾಟ್ಯ ಪ್ರದರ್ಶನಗಳ ಮೂಲಕ ಭಾರತೀಯ ಸಂಸ್ಕೃತಿಯ ಸೊಬಗು ಮತ್ತು ಗಾಂಭೀರ್ಯವನ್ನು ಹರಡಿದರು. ಅವರು ಸುಮಾರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1940 ರ ದಶಕದಲ್ಲಿ, ಅವರ ನೃತ್ಯ ಪ್ರದರ್ಶನಗಳು ಶಾಸ್ತ್ರೀಯ ನೃತ್ಯವನ್ನು ಜನಪ್ರಿಯಗೊಳಿಸಲು ಮತ್ತು ಸಿನಿಮಾಗೆ ತರಲು ಪ್ರಮುಖ ಪಾತ್ರ ವಹಿಸಿದವು.* ಕುಮಾರಿ ಕಮಲಾ ಅವರು ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರು. ಭಾರತೀಯ ಸಾಂಪ್ರದಾಯಿಕ ಕಲೆಗೆ ಜೀವ ತುಂಬಿದ ಅವರ ಪಯಣ ಅನೇಕ ಪೀಳಿಗೆಯ ಕಲಾವಿದರಿಗೆ ಪ್ರೇರಣೆಯಾಗಿದೆ.