* ಚೀನಾದ ಅಧ್ಯಕ್ಷ ಷು ಜಿನ್‌ಪಿಂಗ್ ಅವರು ಹಿರಿಯ ರಾಜತಾಂತ್ರಿಕ ಕ್ಸು ಫೀಹಾಂಗ್ ಅವರನ್ನು ಭಾರತಕ್ಕೆ ನೂತನ ರಾಯಭಾರಿಯಾಗಿ ನೇಮಿಸಿದ್ದಾರೆ.* ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಸೇನಾ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ರಾಯಭಾರಿ ನೇಮಿಸುವುದನ್ನು ಚೀನಾ 18 ತಿಂಗಳು ವಿಳಂಬ ಮಾಡಿದೆ.* ಷು ಫೀಹಾಂಗ್ ಅವರು ಈ ಮೊದಲು ಅಫ್ಘಾನಿಸ್ತಾನ ಮತ್ತು ರೊಮೇನಿಯಾ ದೇಶಗಳಿಗೆ ಚೀನಾದ ರಾಯಭಾರಿಯಾಗಿದ್ದರು. * ಈ ಮೊದಲು ಭಾರತದ ಚೀನಾ ರಾಯಭಾರಿಯಾಗಿದ್ದ ಸನ್ ವೀಡಂಗ್ ಅವರ ಕರ್ತವ್ಯಾವಧಿಯು 2022ರ ಅಕ್ಟೋಬರ್‌ನಲ್ಲಿ ಮುಕ್ತಾಯವಾಗಿತ್ತು.