* ಟಾಟಾ ಸಮೂಹದ ಏರ್ ಇಂಡಿಯಾವು ಫ್ರಾನ್ಸ್‌ನ ಏರ್‌ಬಸ್ ಕಂಪನಿಯಿಂದ ಖರೀದಿಸಿರುವ 20 ವೈಡ್ ಬಾಡಿ (ಅಗಲವಾದ ರಚನೆ) ಎ350 -900 ವಿಮಾನಗಳ ಪೈಕಿ ಮೊದಲ ವಿಮಾನ ಡಿಸೆಂಬರ್ 23 ರಂದು ನವದೆಹಲಿಗೆ ಬಂದಿಳಿದಿದೆ. * ಏರ್ ಇಂಡಿಯಾ ಮಾತ್ರವಲ್ಲದೇ ಭಾರತದ ಯಾವುದೇ ವಿಮಾನಯಾನ ಕಂಪನಿಯೊಂದು ಖರೀದಿಸಿರುವ ಮೊದಲ ವೈಡ್ ಬಾಡಿ ಎ350 ವಿಮಾನವಾಗಿದೆ. * ಟಾಟಾ-ಮಾಲೀಕತ್ವದ ಏರ್‌ಲೈನ್‌ನ ಪ್ರಕಾರ ಏರ್ ಇಂಡಿಯಾದ A350-900 ವಿಮಾನವು ಮೂರು-ವರ್ಗದ ಕ್ಯಾಬಿನ್ ಸಂರಚನೆಯಲ್ಲಿ ಕಾಲಿನ್ಸ್ ಏರೋಸ್ಪೇಸ್ ವಿನ್ಯಾಸಗೊಳಿಸಿದ 316 ಆಸನಗಳೊಂದಿಗೆ ಬರುತ್ತದೆ. 28 ಖಾಸಗಿ ಬಿಸಿನೆಸ್ ಕ್ಲಾಸ್ ಸೂಟ್‌ಗಳು ಪೂರ್ಣ-ಫ್ಲಾಟ್ ಹಾಸಿಗೆಗಳು, 24 ಪ್ರೀಮಿಯಂ ಎಕಾನಮಿ ಸೀಟ್‌ಗಳು ಹೆಚ್ಚುವರಿ ಲೆಗ್‌ರೂಮ್ ಮತ್ತು ಮಲ್ಟಿಪಲ್. ಇತರ ವಿಭಿನ್ನ ವೈಶಿಷ್ಟ್ಯಗಳು ಮತ್ತು 264 ವಿಶಾಲವಾದ ಆರ್ಥಿಕ ವರ್ಗದ ಸೀಟುಗಳು.* ಇತರೆ ವಿಮಾನಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ಜನ ಪ್ರಯಾಣಿಸಬಹುದಾಗಿದ್ದು, ಇಂಧನ ವೆಚ್ಚವೂ ಇತರೆ ಸಾಂಪ್ರದಾಯಿಕ ವಿಮಾನಗಳಗಿಂತ ಶೇ.25ರಷ್ಟು ಕಡಿಮೆಯಿದ್ದು, ಜೊತೆಗೆ ಆಧುನಿಕ ಸೌಕರ್ಯ, ಹೆಚ್ಚಿನ ರಕ್ಷಣೆಯ ಸೌಲಭ್ಯಗಳನ್ನು ಅಂದಾಜು 2500 ಕೋಟಿ ರು. ವೆಚ್ಚದ ವಿಮಾನ ಹೊಂದಿದೆ. * 5 ವಿಮಾನಗಳು 2024ರ ಮಧ್ಯಭಾಗದಲ್ಲಿ ಹಸ್ತಾಂತರವಾಗಲಿದೆ. ಏರ್ ಇಂಡಿಯಾ  ಬಳಿಕಹಂತಹಂತವಾಗಿ ಉಳಿದ 14 ವಿಮಾನಗಳು ಏರ್ ಇಂಡಿಯಾಕ್ಕೆ ಪೂರೈಕೆಯಾಗಲಿದೆ.* ಸರ್ಕಾರದಿಂದ ಏರ್ ಇಂಡಿಯಾ ಖರೀದಿಸಿರುವ ಟಾಟಾ ಸಮೂಹ, ಏರ್‌ಬಸ್‌ನ 250 ವಿಮಾನ ಮತ್ತು ಬೋಯಿಂಗ್ ನ 220 ವಿಮಾನ ಖರೀದಿ ಮಾಡಲು 5.81 ಲಕ್ಷ ಕೋಟಿ ರು. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು.