* ರಷ್ಯಾ ಬ್ಯಾಂಕುಗಳಲ್ಲಿ ಭಾರತೀಯರು ಸುಲಭವಾಗಿ ಖಾತೆ ತೆರೆಯಲು ಅನುಕೂಲವಾಗುವಂತೆ ಪುಟಿನ್ ಸರಕಾರವು ನಿಯಮಗಳನ್ನು ಸಿದ್ಧಪಡಿಸಿದೆ.* ಭಾರತೀಯರು ರಷ್ಯನ್ ಬ್ಯಾಂಕುಗಳಿಗೆ ತೆರಳದೆಯೇ, ತಾವಿದ್ದಲ್ಲಿಂದಲೇ ರಷ್ಯಾದ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. * ಈ ಕ್ರಮದಿಂದ ಎರಡೂ ದೇಶಗಳ ನಡುವೆ ವಿತ್ತೀಯ ಸಂಬಂಧ ಬಲಗೊಳ್ಳುವ ಹಾಗೂ ಹೂಡಿಕೆ  ಅವಕಾಶಗಳು ಹೆಚ್ಚುವ ನಿರೀಕ್ಷೆಯನ್ನು ರಷ್ಯಾ ವ್ಯಕ್ತಪಡಿಸಿದೆ. ರಷ್ಯಾಗೆ ಆಗಮಿಸುವ ಭಾರತೀಯ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲ ವಾಗಲಿದೆ ಎಂದು ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.* ರಷ್ಯಾದ ಬ್ಯಾಂಕ್ ಖಾತೆಗಳನ್ನು ತೆರೆಯಲು ಅಥವಾ ರಷ್ಯಾದ ಬ್ಯಾಂಕ್‌ಗಳಲ್ಲಿ ಹಣವನ್ನು ರಿಮೋಟ್ ಆಗಿ ಠೇವಣಿ ಮಾಡಲು ಸಾಧ್ಯವಿದೆ” ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.