* ದೇಶದ ರಕ್ಷಣಾ ವ್ಯವಸ್ಥೆಯಲ್ಲಿನ ಸ್ವದೇಶಿ ನಿರ್ಮಿತ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ರಫ್ತು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 2022 ರಲ್ಲಿ ಸಹಿ ಮಾಡಿದ $375 ಮಿಲಿಯನ್ ಒಪ್ಪಂದದ ಭಾಗವಾಗಿ ಭಾರತ ಏಪ್ರಿಲ್ 19 ರಂದು (ಶುಕ್ರವಾರ) ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು ಸೇರ್ಪಡೆಯಾಗಿವೆ. * ಆಂಟಿ-ಶಿಪ್ ಕ್ರೂಸ್ ಕ್ಷಿಪಣಿಯ ತೀರ-ಆಧಾರಿತ ರೂಪಾಂತರದ ಒಪ್ಪಂದವು ಭಾರತದ ಮೊದಲ ಪ್ರಮುಖ ರಫ್ತು ಆದೇಶವನ್ನು ಗುರುತಿಸಿದೆ. ಕ್ಷಿಪಣಿಯು ಸುಮಾರು 290 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.* ನಾಗರೀಕ ವಿಮಾನಯಾನ ಏಜೆನ್ಸಿಗಳ ಮೂಲಕ ಭಾರತೀಯ ನೌಕಾಪಡೆಯ ನೇತೃತ್ವದಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಫಿಲಿಪೈನ್ಸ್‌ಗೆ ಹಸ್ತಾಂತರಿಸಲಾಗುತ್ತದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.* 'ಬ್ರಹ್ಮೋಸ್' ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ ಉಡಾವಣೆ ಮಾಡಬಹುದಾಗಿದ್ದು, ಜನವರಿ 11, 2022ರಂದು 'ಬ್ರಹ್ಮೋಸ್' ಸೂಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.