* ಭಾರತೀಯ ನೌಕಾಪಡೆಯು 2023 ಅಕ್ಟೋಬರ್ 30ರಂದುಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದು, 'DSC 21' ಎಂಬ ನೌಕೆಗೆ ಚಾಲನೆ ನೀಡಿದೆ. * ಈ ಸಾಧನೆಯು ಡೈವಿಂಗ್ ಸಪೋರ್ಟ್ ಕ್ರಾಫ್ಟ್ (DSC) ಯೋಜನೆಯಲ್ಲಿ ನಿರ್ಮಾಣಗೊಂಡ ಎರಡನೇ ನೌಕೆ ಇದಾಗಿದೆ. * ಭಾರತದ ನೌಕಾಪಡೆಯು ಕೋಲ್ಕತಾದಲ್ಲಿರುವ ಮೆಸರ್ಸ್ ತಿತಾಗಡ್ ರೈಲ್ವೆ ಸಿಸ್ಟಮ್ಸ್ ಸಂಸ್ಥೆ (ಟಿಆರ್‌ಎಸ್ಎಲ್) ಯೊಂದಿಗೆ ಜಂಟಿ ಯೋಜನೆಯ ಮೂಲಕ ಈ ಮಹತ್ತರ ಸಾಧನೆಯನ್ನು ಮಾಡಿದೆ. * 'ಡಿಎಸ್‌ಸಿ ಎ 21' ಚಾಲನೆ ಮತ್ತು ಇಡಿಯಾಗಿ ಡಿಎಸ್‌ಸಿ ಯೋಜನೆಯು ರಕ್ಷಣಾ ವಲಯದಲ್ಲಿ ಭಾರತದ ಹೆಚ್ಚುತ್ತಿರುವ ಸ್ವಾವಲಂಬನೆಯ ಮಹತ್ವವನ್ನು ತೋರಿಸುತ್ತದೆ. * ಈ ನೌಕೆಗಳು ಭಾರತದ ಹಡಗು ನಿರ್ಮಾಣ ಕೈಗಾರಿಕೆಯ ಮಹತ್ವದ ಸಾಧನೆಯನ್ನು ಪ್ರತಿನಿಧಿಸುತ್ತವೆ ಹಾಗೂ ಜಲ ಪ್ರದೇಶದಲ್ಲಿ ಭಾರತೀಯ ನೇವಿಯ ಸಾಮರ್ಥ್ಯಗಳನ್ನು ಹೆಚ್ಚಿಸಲು ನೆರವಾಗಲಿವೆ.