* ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಷಿ  ಜಿನ್ ಪಿಂಗ್ ಗೈರಾಗುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.* ಜಿ-20 ಶೃಂಗಸಭೆ ಸಂದರ್ಭದಲ್ಲಿಯೇ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು  ಅಮೆರಿಕ ಅಧ್ಯಕ್ಷ ಜೋ ಬ್ರೆಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.* 2.5 ಲಕ್ಷ ಹೂಕುಂಡಗಳ ಮೂಲಕ ದೆಹಲಿಯ ರಸ್ತೆಗಳನ್ನು ಅಲಂಕರಿಸಲಾಗುತ್ತಿದೆ.ದೆಹಲಿಯಲ್ಲಿ ಸೆ.9 ಮತ್ತು 10ರಂದು ಜಿ20 ಶೃಂಗಸಭೆ ನಡೆಯಲಿದೆ.  ಪರಿಸರ ಸಚಿವ ಗೋಪಾಲ್ ರಾಯ್ ಅವರು ಜಿ20 ಶೃಂಗಸಭೆಯಲ್ಲಿ  ಸುಮಾರು 2.5 ಲಕ್ಷ ಹೂಕುಂಡಗಳ ಮೂಲಕ ದೆಹಲಿಯ ರಸ್ತೆಗಳನ್ನು ಅಲಂಕರಿಸುವ ಕಾರ್ಯ ನಡೆಯುತ್ತಿದೆ ಎಂದು ಆಗಸ್ಟ್ 30 ರಂದು ತಿಳಿಸಿದರು.* ಈ ಗಿಡಗಳ ನಿರ್ವಹಣೆಯ ಜವಾಬ್ದಾರಿಯನ್ನು ಇಲಾಖೆಯ ಸುಮಾರು 300 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ * ದೆಹಲಿ ಸರ್ಕಾರ ಈ ವರ್ಷ 52 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದು, ಈಗಾಗಲೇ 36 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದ್ದಾರೆ.