* ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (2)-20238 9ನೇ ಆವೃತ್ತಿಯು ಹರಿಯಾಣದ ಫರಿದಾಬಾದ್‌ನಲ್ಲಿ 2024ರ ಜನವರಿ 17ರಿಂದ 20ರವರೆಗೆ ನಡೆಯಲಿದ್ದು, 'ಅಮೃತಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾರ್ವಜನಿಕರಿಗೆ ಸಂಪರ್ಕ' ಎಂಬ ಘೋಷವಾಕ್ಯದಡಿ ಐಐಎಸ್‌ಎಫ್-2023 ಅನ್ನು ಆಯೋಜಿಸಲಾಗಿದೆ. * ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸಂಶೋಧಕರು, ಉದ್ಯಮ ವೃತ್ತಿಪರರು, ಉದ್ಯಮಿಗಳು ಹಾಗೂ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಗುರಿಯನ್ನು ಐಐಎಸ್‌ಎಫ್ ಹೊಂದಿದೆ.* ಉತ್ಸವವು ವೈಜ್ಞಾನಿಕ ಸಾಧನೆಗಳನ್ನು ಪ್ರದರ್ಶಿ ಸುವ 17 ಥೀಮ್‌ಗಳನ್ನು ಒಳಗೊಂಡಿರುತ್ತದೆ. ಇದು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ವೈವಿಧ್ಯಮಯ ಪ್ರಯೋಜನಗಳನ್ನು ಒದಗಿಸುತ್ತದೆ. * ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ತಜ್ಞರು ಸೆಮಿನಾರ್‌ಗಳನ್ನು ನೀಡಲಿದ್ದು, ಸಂವಾದ, ಪ್ರದರ್ಶನ, ಸ್ಪರ್ಧೆಗಳು, ಕಾರ್ಯಗಾರಗಳು, ತಂತ್ರಜ್ಞಾನ ಪ್ರದರ್ಶನವನ್ನು ಮಾಡಲಾಗುತ್ತದೆ.