* ಅಮೆರಿಕಾದ ಟೆಕ್ ದೈತ್ಯ ಗೂಗಲ್ ಕಂಪನಿಯು ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ 'ಗೂಗಲ್ ವ್ಯಾಲೆಟ್' (Google Wallet) ಸೇವೆಗಳನ್ನು ಪ್ರಾರಂಭಿಸಿದೆ.* 'Google Pay app'ಭಿನ್ನವಾಗಿರುವ "ಗೂಗಲ್ ವಾಲೆಟ್" ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್ ಸೇರಿದಂತೆ ಇತರೆ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ.* Google 2022 ರಲ್ಲಿ ಅಮೇರಿಕಾದಲ್ಲಿ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ Google Wallet ಅನ್ನು ಪ್ರಾರಂಭಿಸಿದ್ದು, ಆಂಡ್ರಾಯ್ಡ್ ಬಳಕೆದಾರರು ಇದೀಗ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.* ಈ ಹೊಸ ಸೇವೆಗಾಗಿ ಏರ್ ಇಂಡಿಯಾ, ಇಂಡಿಗೊ, ಪ್ಲಿಪ್‌ಕಾರ್ಟ್, ಪೈನ್ ಲ್ಯಾಬ್, ಕೊಚ್ಚಿ ಮೆಟ್ರೊ, ಪಿವಿಆರ್ ಮತ್ತು ಐನಾಕ್ಸ್ ಸೇರಿ 20 ಸಂಸ್ಥೆಗಳ ಸಹಯೋಗದೊಂದಿಗೆ ಪಾಲುದಾರಿಕೆ ಮಾಡಿ ಕೊಳ್ಳಲಾಗಿದೆ. * Google Wallet ವೆಬ್‌ಸೈಟ್‌ನಲ್ಲಿನ ಪ್ರಕಾರ Google Wallet ಎಂಬುದು 'ಸುರಕ್ಷಿತ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್' ಆಗಿದ್ದು ಅದು ಬಳಕೆದಾರರಿಗೆ ಲಾಯಲ್ಟಿ ಕಾರ್ಡ್‌ಗಳಿಗೆ ತ್ವರಿತ ಪ್ರವೇಶ ಒದಗಿಸುತ್ತದೆ.* ಬಳಕೆದಾರರು ಸಿನಿಮಾ, ಈವೆಂಟ್ ಟಿಕೆಟ್, ಬೋರ್ಡಿಂಗ್ ಪಾಸ್, ಸಾರ್ವಜನಿಕ ಸಾರಿಗೆ ಪಾಸ್, ಗಿಫ್ಟ್ ಕಾರ್ಡ್ ಸೇರಿದಂತೆ ಎಲ್ಲವನ್ನು ಗೂಗಲ್ ವಾಲೆಟ್ನಲ್ಲಿ ಸುರಕ್ಷಿತವಾಗಿಡಬಹುದು.* Google Wallet ಸೇವೆಗಳು Google Pay ಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದು, ಇದು ಅತ್ಯಂತ ಸುರಕ್ಷಿತ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್ ಆಗಿದ್ದು, ಪ್ರಸ್ತುತ ಗೂಗಲ್ ವಾಲೆಟ್ 80 ಕ್ಕೂ ಹೆಚ್ಚು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ.