* ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮೇ 20 ರಂದು (ಸೋಮವಾರ) ರೋಗದ ವಿರುದ್ಧ ಜಾಗತಿಕ ಹೋರಾಟದ ಭಾಗವಾಗಿ ಆಫ್ರಿಕಾಕ್ಕೆ 'ಆರ್ 21/ಮ್ಯಾಟ್ರಿಕ್ಸ್-ಎಂ' ಮಲೇರಿಯಾ ಲಸಿಕೆಯನ್ನು ರಫ್ತು ಮಾಡಲು ಪ್ರಾರಂಭಿಸಿದೆ ಎಂದು ಹೇಳಿದೆ .* ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ನೊವಾವ್ಯಾಕ್ಸ್‌ನ ಮ್ಯಾಟ್ರಿಕ್ಸ್-ಎಂ ಸಹಯೋಗ ದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಿಳಿಸಿದೆ.* ಆರಂಭಿಕ ಹಂತದಲ್ಲಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ಗೆ (ಸಿಎಆರ್) ಸಾಗಣೆ ಮಾಡಲಾಗಿದೆ. ಇತರೆ ಆಫ್ರಿಕಾದ ದೇಶಗಳಾದ ದಕ್ಷಿಣ ಸುಡಾನ್ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋಗೆ ಮುಂದಿನ ದಿನಗಳಲ್ಲಿ ರಫ್ತು ಮಾಡಲಾಗುವುದು ಎಂದು ತಿಳಿಸಿದೆ. * ಒಟ್ಟು 1.63 ಲಕ್ಷ ಡೋಸ್‌ಗಳಲ್ಲಿ 43,200 ಡೋಸ್‌ಗಳನ್ನು ಮಾತ್ರ ಎಸ್‌ಐಐನ ಪುಣೆಯ ಘಟಕದಿಂದ ಸಾಗಣೆ ಮಾಡಲಾಗಿದೆ.* ಅಡಾರ್ ಪೂನಾವಾಲ್ಲಾ ಮತ್ತು ಭಾರತಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಮೇ 20, ಸೋಮವಾರದಂದು R21/Matrix-M ಮಲೇರಿಯಾ ಲಸಿಕೆ ಡೋಸ್‌ಗಳ ಮೊದಲ ರವಾನೆಯನ್ನು ಫ್ಲ್ಯಾಗ್ ಮಾಡಿದರು.* ಆಫ್ರಿಕಾಕ್ಕೆ ಆರ್21/ ಮ್ಯಾಟ್ರಿಕ್ಸ್-ಎಂ ಮಲೇರಿಯಾ ಲಸಿಕೆ ರವಾನೆಯು ಈ ಮಾರಣಾಂತಿಕ ಕಾಯಿಲೆಯ ವಿರುದ್ಧದ ನಮ್ಮ ಸಾಮೂಹಿಕ ಹೋರಾಟದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ ಎಂದು ಅಭಿವೃದ್ಧಿಯ ಕಾರ್ಯ ನಿರ್ವಾಹಕ ನಿರ್ದೇಶಕ ಉಮೇಶ್ ಸಾಲಿಗ್ರಾಮ್ ಅವರು ತಿಳಿಸಿದ್ದಾರೆ.* 2023 ರ ಅಕ್ಟೋಬರ್‌ನಲ್ಲಿ ಲಸಿಕೆಯು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಕ್ಕಳಿಗೆ ಬಳಸಲು ಅನುಮತಿ ಪಡೆದಿದೆ. ಲಸಿಕೆ ಕೈಗೆಟುಕುವ ಬೆಲೆಯಲ್ಲಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆ ತಿಳಿಸಿದೆ.