* ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಮೈದಾನದಲ್ಲಿ ಜುಲೈ 28 ರಂದು ನಡೆದ ಮಹಿಳಾ ಟಿ 20 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದೆ.* ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ಸ್ಮೃತಿ ಮಂದಾನ (69), ರೋಡ್ರಿಗಾಸ್, ರಿಚಾ ಘೋಷ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ಗಳು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ.* ಶ್ರೀಲಂಕಾ ಪರ ಬ್ಯಾಟ್ ಮಾಡಿದ ಚಾಮರಿ ಅಟಪಟ್ಟು 43 ಎಸೆತಗಳಲ್ಲಿ  61 ರನ್ ಗಳಿಸಿದರೇ, ಹರ್ಷಿತಾ ಸಮರವಿಕ್ರಮ 51 ಎಸೆತಗಳಲ್ಲಿ 69 ರನ್ ಹಾಗೂ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯ ಇನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಮಾತ್ರ ವಹಿಸಿದರು.* ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂದಾನ 47 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದರು. ಮಧ್ಯಮ ಕ್ರಮಾಂಕದಲ್ಲಿ ರೋಡ್ರಿಗಾಸ್ 29, ರಿಚಾ ಘೋಷ್ 30 ರನ್ಗಳ ಕೊಡುಗೆ ನೀಡಿದರು. ಉಳಿದಂತೆ ಶೆಫಾಲಿ (16), ಉಮಾ ಚೆಟ್ರಿ (9), ಹರ್ಮನ್ಪ್ರೀತ್ ಕೌರ್ (11), ಪೂಜಾ ವಸ್ತ್ರಾಕರ್ (5), ರಾಧ ಯಾದವ್ (1) ಹೇಳಿಕೊಳ್ಳವಂತಹ ಪ್ರದರ್ಶನ ತೋರಲಿಲ್ಲ. ಬೌಲಿಂಗ್ನಲ್ಲಿ ಶ್ರೀಲಂಕಾ ಪರ ಕವಿಶಾ ದಿಲ್ಹಾರಿ 2 ವಿಕೆಟ್ ಪಡೆದು ಮಿಂಚಿದರು.* ಭಾರತ ಮಹಿಳೆಯರಿಗೆ 9 ಆವೃತ್ತಿಗಳಲ್ಲಿ ಇದು ಫೈನಲ್‌ನಲ್ಲಿ  ಎದುರಾದ ಎರಡನೇ ಸೋಲು. 2018ರ ಆವೃತ್ತಿಯಲ್ಲಿ ಮೊದಲ ಸಲ ಬಾಂಗ್ಲಾದೇಶ ಎದುರು ಫೈನಲ್‌ನಲ್ಲಿ ಸೋತಿತ್ತು. ಭಾರತ ಈ ಟೂರ್ನಿಯಲ್ಲಿ ಏಳು ಬಾರಿ ಚಾಂಪಿಯನ್ ಆಗಿದೆ.