* ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭಾರತದ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ತಂಡಗಳು ಮೊದಲ ಬಾರಿಗೆ ಪ್ಯಾರಿಸ್ ಒಲಂಪಿಕ್ಸ್ ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ಬರೆದಿವೆ.* ಭಾರತದ ಟೇಬಲ್ ಟೆನಿಸ್ ಇತಿಹಾಸದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ, ಬೀಜಿಂಗ್ 2008 ಕ್ರೀಡಾಕೂಟದಲ್ಲಿ ತಂಡ ವಿಭಾಗದ ಸ್ಪರ್ಧೆಗಳು ಪ್ರಾರಂಭವಾದ ನಂತರ ರಾಷ್ಟ್ರವು ಒಲಂಪಿಕ್ಸ್ ನಲ್ಲಿ ಇದೆ ಮೊದಲ ಬಾರಿಗೆ ಸ್ಪರ್ದಿಸಲು ಅವಕಾಶವನ್ನು ಪಡೆದುಕೊಂಡಿದೆ.* ಅನುಭವಿ ಶರತ್ ನೇತೃತ್ವದ ಪುರುಷರ ಟೇಬಲ್ ಟೆನಿಸ್ ತಂಡವು ದಕ್ಷಿಣ ಕೊರಿಯಾ ವಿರುದ್ಧ 0-3 ಗೋಲುಗಳಿಂದ ಸೋತರೆ, ಮಣಿಕಾ ಬಾತ್ರಾ ನೇತೃತ್ವದ ಮಹಿಳಾ ತಂಡವು ಚೀನಾ ತೈಪೆ ವಿರುದ್ಧ 1-3 ಅಂತರದಲ್ಲಿ ಸೋತಿತು.* ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪುರುಷ ಮತ್ತು ಮಹಿಳಾ ತಂಡಗಳು ಕ್ರೀಡಾಕೂಟಕ್ಕೆ ಏಷ್ಯಾ ಮತ್ತು ಯುರೋಪ್‌ನಲ್ಲಿ ತರಬೇತಿ ಪಡೆಯುವ ನಿರೀಕ್ಷೆ ಇದೆ.