* ಭಾರತದ ಗ್ರೀನ್ ಆಫೀಸ್ ಸ್ಪೇಸ್(ಹಸಿರು ಕಚೇರಿ ಸ್ಥಳಾವಕಾಶ)ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದಿದ್ದು, ಶೇಕಡಾ 30 ರಷ್ಟು ಅಂದರೆ 104.5 ಮಿಲಿಯನ್ ಚದರ ಅಡಿ ಹಸಿರು ಕಚೇರಿಗಳನ್ನು ಸಿಲಿಕಾನ್ ಸಿಟಿ ಹೊಂದಿದೆ.* ಸೆಪ್ಟೆಂಬರ್ 27 ರಂದು ಬಿಡುಗಡೆಯಾದ ರಿಯಲ್ ಎಸ್ಟೇಟ್‌ನ CII-CBRE ವರದಿಯ ಪ್ರಕಾರ, 70.2 ಮಿಲಿಯನ್ ಚದರ ಅಡಿಗಳೊಂದಿಗೆ ಹಸಿರು ಕಚೇರಿಯನ್ನು ದೆಹಲಿ ಎನ್ ಸಿಆರ್ ಎರಡನೇ ಸ್ಥಾನದಲ್ಲಿದೆ.* ದೇಶದ ವಾಣಿಜ್ಯ ರಾಜಧಾನಿ ಮುಂಬೈ, 56.6 ಮಿಲಿಯನ್ ಚದರ ಅಡಿ ಹಸಿರು ಕಚೇರಿಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. ಹಸಿರು ಕಚೇರಿ ಸ್ಥಳಾವಕಾಶದ ಪಟ್ಟಿಯಲ್ಲಿ ಹೈದರಾಬಾದ್ ನಾಲ್ಕನೆ ಸ್ಥಾನದಲ್ಲಿದ್ದು, ಚೆನ್ನೈ ಮತ್ತು ಪುಣೆ ನಂತರದ ಸ್ಥಾನದಲ್ಲಿವೆ.* ಹಸಿರು ಕಛೇರಿಗಳನ್ನು ಇಂಧನ ದಕ್ಷತೆ ಮತ್ತು ಮರುಬಳಕೆ ವಸ್ತುಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು, ಇಂಧನ ಉಳಿಸುವುದು ಮತ್ತು ಮಾಲಿನ್ಯ ಕಡಿಮೆ ಮಾಡುವುದು ಇದರ ಗುರಿಯಾಗಿದೆ.