* ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರು ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ ( ಪಿಜಿಟಿಐ ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.* 1983 ರಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಐತಿಹಾಸಿಕ ODI ವಿಶ್ವಕಪ್ ಗೆಲುವಿಗೆ ಕಾರಣರಾದ ಕಪಿಲ್ ದೇವ್ ಅವರು ಈ ಹಿಂದೆ PGTI (Professional Golf Tour of India) ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.* ಕ್ರಿಕೆಟ್‌ನಿಂದ ನಿವೃತ್ತಿಯ ನಂತರ ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಹೊಂದಿದ್ದ ಕಪಿಲ್ ದೇವ್ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.* 65 ವರ್ಷ ವಯಸ್ಸಿನ ಕಪಿಲ್ ದೇವ್ ಅವರು ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ನಂತರ PGTI ಗೆ ಸಂಪೂರ್ಣ ಬದ್ಧತೆಯಿಂದ ಸೇವೆ ಸಲ್ಲಿಸುವುದಾಗಿ ವಾಗ್ದಾನ ಮಾಡಿದರು.* ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಕಪಿಲ್ ಅವರು "ನಾನು ಕೆಲವು ವರ್ಷಗಳಿಂದ ಗಾಲ್ಫ್ ಸಂಸ್ಥೆಯ ಜೊತೆಗೆ ಸಂಬಂಧ ಹೊಂದಿದ್ದೇನೆ. ಮಂಡಳಿಯ ಸದಸ್ಯ, ಉಪಾಧ್ಯಕ್ಷ ಸ್ಥಾನದ ಬಳಿಕ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಹವ್ಯಾಸಿ ಆಟಗಾರನಾಗಿರುವ ನನಗೆ ಸಂಸ್ಥೆಯ ಹೊಣೆಗಾರಿಕೆಯಂತಹ ದೊಡ್ಡ ಗೌರವ ಸಿಕ್ಕಿದೆ. ಇದೊಂದು ಉತ್ತಮ ಆಟಗಾರರ ಸಂಸ್ಥೆ. ಇಲ್ಲಿರುವ ಆಟಗಾರರು ನನಗೆ ಉತ್ತಮ ಸ್ನೇಹಿತರು" ಎಂದಿದ್ದಾರೆ.