Job Description: * ದಕ್ಷಿಣ ಮುಂಬೈ ಹಾಗೂ ಉಪನಗರ ನವಿ ಮುಂಬೈ ನಡುವೆ ಹೊಸದಾಗಿ ನಿರ್ಮಿಸಲಾಗಿರುವ ಅಟಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ (ಜನವರಿ 12) ರಂದು ಉದ್ಘಾಟಿಸಿದರು.* 21.8 ಕಿ ಲೋ ಮೀಟರ್ ಉದ್ದದ ಈ ಸೇತುವೆ ಮೂಲಕ ಜನರು ಮುಂಬಯಿಯಿಂದ ನವಿ ಮುಂಬಯಿಗೆ ಕೇವಲ 20 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ಎರಡು ನಗರಗಳ ಪ್ರಯಾಣದ ಅಂತರ ಈ ಹಿಂದೆ 2 ಗಂಟೆಯದ್ದಾಗಿತ್ತು. ಈ ಯೋಜನೆಯಿಂದ ಜನರಿಗೆ ಪ್ರಯಾಣದ ಅವಧಿ ಕಡಿತಗೊಳ್ಳಲಿದೆ ಮತ್ತು ಸುಗಮ ಸಂಚಾರ ಸಾಧ್ಯವಾಗಲಿದೆ.* 30 ವರ್ಷಗಳ ಹಿಂದೆ ರೂಪಿಸಲಾದ ಈ ಯೋಜನೆಯನ್ನು 2016ರಲ್ಲಿ ಆರಂಭಿಸಲಾ ಯಿತು. ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಇದಕ್ಕೆ ಅಟಲ್ ಸೇತುವೆ ಎಂದು ಹೆಸರಿಡಲಾಗಿತ್ತು. ನಿರ್ಮಾಣ ಕಾರ್ಯ ಮುಂಬಯಿಯ ಸೇವ್ರಿಯಿಂದ, ರಾಯಗಢ ಜಿಲ್ಲೆಯ ನ್ಯಾವಾ ಶೆವಾವರೆಗೆ ಪೂರ್ಣಗೊಂಡಿದೆ. ಆದರೆ ಸೇತುವೆ ಮಾರ್ಗವು ಉಲ್ವೆಯಲ್ಲಿರುವ ಚಿರ್ಪೆ, ಉರಾನ್ ತಾಲೂಕು, ನವಿ ಮುಂಬಯಿ, ದಕ್ಷಿಣ ಮುಂಬಯಿಯ ಸೇವ್ರಿಗೆ ಸಂಪರ್ಕಿಸುತ್ತದೆ.* ಅಟಲ್ ಸೇತುವೆಯ ಒಟ್ಟು ಯೋಜನಾ ವೆಚ್ಚವು 18,000 ಕೋಟಿ ರೂ ಆಗಿದೆ, ಈ ಸೇತುವೆಯ ನಿರ್ಮಾಣಕ್ಕಾಗಿ 1,70 ಲಕ್ಷ ಟನ್ ಉಕ್ಕು ಬಳಕೆ ಮಾಡಲಾಗಿದೆ. ಸೇತುವೆ ನಿರ್ಮಾಣದಲ್ಲಿ ಬಳಕೆಯಾಗಿರುವ ಉಕ್ಕಿನ ಕಂಬಿಗಳ ಒಟ್ಟು ತೂಕ ಇದು ಫ್ಯಾರೀಸ್ ನಲ್ಲಿ ಇರುವ ಐಫೇಲ್ ಗೋಪುರದ ಒಟ್ಟು ತೂಕಕ್ಕಿಂತ 17 ಪಟ್ಟು ಹೆಚ್ಚಾಗಿದೆ.* 5.04 ಲಕ್ಷ ಮೆಟ್ರಿಕ್ ಟನ್ ಸಿಮೆಂಟನ್ನು ಬಳಕೆ ಮಾಡಲಾಗಿದೆ. ಭಾರತದ ಏಕತೆ ಪ್ರತಿಮೆ ನಿರ್ಮಾಣದಲ್ಲಿ ಬಳಕೆ ಯಾಗಿರುವ ಸಿಮೆಂಟ್ ಗಿಂತ ಸರಿ ಸುಮಾರು 6 ಪಟ್ಟು ಹೆಚ್ಚು ಸಿಮೆಂಟ್ ಅನ್ನು ಈ ಸೇತುವೆ ನಿರ್ಮಾಣದಲ್ಲಿ ಬಳಸಲಾಗಿದೆ.* ಈ ಸೇತುವೆಯ ಒಟ್ಟು ಉದ್ದ : 22 ಕಿ.ಮೀ * ಭೂಭಾಗದಲ್ಲಿ ಹಾದು ಹೋಗಿರುವ ಮಾರ್ಗದ ವ್ಯಾಪ್ತಿ : 5.5 ಕಿ.ಮೀ * ಸೇತುವೆಯಲ್ಲಿನ ಪಥ : 6 * ಸಮುದ್ರ ಮಟ್ಟದಿಂದ ಸೇತುವೆಯ ಎತ್ತರ : 15 ಮೀಟರ್ * ಸೇತುವೆಯ ಜೀವಿತಾವಧಿ : ವರ್ಷ 100* ನೂತನ ಅಟಲ್ ಸೇತುವೆ ಮೇಲೆ ಪ್ರಯಾಣಿಸುವ ವಾಹನಗಳು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒನ್ ವೇ ಟ್ರಿಪ್‌ಗೆ 250 ರೂ. ನಿಗದಿಪಡಿಸಲಾಗಿದ್ದರೆ, ಟೂ ವೇ ಟ್ರಿಪ್‌ಗೆ 375 ರೂ. ನಿಗದಿಪಡಿಸಲಾಗಿದೆ ಒಂದು ವರ್ಷದ ಬಳಿಕ ಟೋಲ್ ಶುಲ್ಕವನ ಪರಿಷ್ಕರಣೆಗೊಳಪಡಿಸುವುದಾಗಿ ಮಹಾರಾಷ್ಟ್ರ ಸರಕಾರ ತಿಳಿಸಿದೆ.* ಈ ಸೇತುವೆಯನ್ನು ಪ್ರತಿದಿನ ಅಂದಾಜು 70ಸಾವಿರ ವಾಹನಗಳು ಬಳಸುವ ಸಾಧ್ಯತೆ ಇದೆ.