* ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಲಕ್ಷದ್ವೀಪ ಭೇಟಿಯ ಬಳಿಕ ಮಾಲ್ಮೀಮ್ಸ್‌ನ ಮೂವರು ಮಂತ್ರಿಗಳು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗಳು ಭಾರತ ಮತ್ತು ಮಾಲ್ಮೀನ್ಸ್ ಸಂಬಂಧ ಹದಗೆಡಲು ಕಾರಣವಾಗಿದೆ. * ಹೇಳಿಕೆ ನೀಡಿದ ಬೆನ್ನಲ್ಲೇ ಮಾಲ್ಮೀನ್ಸ್ ಸರಕಾರ ಆ ಮೂವರು ಸಚಿವರನ್ನು ಅಮಾನತು ಮಾಡಿದೆ. ಉಭಯ ರಾಷ್ಟ್ರಗಳು ತಮ್ಮ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಮಾಲ್ಡೀವ್ಸ್  ಸಂಬಂಧ ಹೇಗಿತ್ತು ಉಭಯ ರಾಷ್ಟ್ರಗಳ ಸಂಬಂಧ ಹದಗೆಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇನ್ನೊಂದು ರಾಷ್ಟ್ರವಾಗಿದೆ.* ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸಂಬಂಧಗಳು ಹಲವು ಕಾರಣಗಳಿಗಾಗಿ ಬಹಳ ಮುಖ್ಯವಾಗಿವೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತಾ ದೃಷ್ಟಿಯಿಂದ ಭಾರತಕ್ಕೆ ಮಾಲ್ಡೀವ್ಸ್ ಬಹಳ ಮುಖ್ಯ. ಮತ್ತು ಭಾರತದಂತಹ ದೇಶವು ಅನೇಕ ವಿಷಯಗಳಲ್ಲಿ ಮಾಲ್ಡೀವ್ಸ್‌ಗೆ ಪರಿಹಾರವಾಗಿದೆ. * ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಿದೆ. ಮಾಲ್ಡೀವ್ಸ್‌ನ ನೂತನ ಅಧ್ಯಕ್ಷರು ಚೀನಾವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. * ಈ ಹಿಂದಿನಿಂದಲೂ ಮಾಲ್ಡೀವ್ಸ್ ನ ಅಧ್ಯಕ್ಷರಾದವರು 'ಭಾರತ ಮೊದಲು' ಎನ್ನುವ ವಿದೇಶಾಂಗ ನೀತಿಯನ್ನು ಅನುಸರಿಸಿದ್ದರು. ಆದರೆ, 2013ರಿಂದ 2018ರ ವರೆಗೆ ಅಧ್ಯಕ್ಷರಾಗಿದ್ದ ಅಬ್ದುಲ್ಲಾಯಮೀನ್ ಅವರು ಚೀನಾ ಪರ ಒಲವು ಹೊಂದಿದವರಾಗಿದರು. 'ಭಾರತ ಮೊದಲು' ಎಂದು ತೋರಿಸಿಕೊಂಡರು ಚೀನಾಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿದರು.* 2023 ರಲ್ಲಿ ಆಯ್ಕೆಯಾದ ಮಾಲ್ಡೀವ್ಸ್ ನ ಅಧ್ಯಕ್ಷ ಮುಯಿಜು ಅವರು ಮಾಲ್ಡೀವ್ಸ್ ನೊಂದಿಗಿನ ಭಾರತದ ಸಂಬಂಧವನ್ನು ಸಂಪೂರ್ಣವಾಗಿ ವಿರೋದಿಸಿದರು. ಭಾರತ ಮೊದಲು ನೀತಿಯು ಈಗ 'ಭಾರತ ಹೊರಹೋಗಲಿ'ಎಂದು ಬದಲಾಗಿದೆ.