Job Description: * 15ನೇ ಆವೃತ್ತಿ ಹಾಕಿ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಕ್ವಾರ್ಟರ್‌ ಫೈನಲ್‌ ಹಂತಕ್ಕೂ ಪ್ರವೇಶಿಸಲು ವಿಫಲವಾದ ಬೆನ್ನಲ್ಲೇ ತಂಡದ ಪ್ರಮುಖ ಕೋಚ್‌ ಗ್ರಹಾಂ ರೀಡ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. * ಗ್ರಹಾಂ ರವರ ಜೊತೆ ವೈಜ್ಞಾನಿಕ ಸಲಹೆಗಾರ ಮಿಚೆಲ್‌ ಡೇವಿಡ್‌ ಪೆಂಬೆರ್ಟನ್‌, ಸಹಾಯಕ ಕೋಚ್‌ ಗ್ರೆಗ್‌ ಕ್ಲಾರ್ಕ್ ಕೂಡಾ ಹುದ್ದೆ ತ್ಯಜಿಸಿದ್ದು, ಜನವರಿ 30 ರಂದು ರಾಜೀನಾಮೆ ಪತ್ರವನ್ನು ಹಾಕಿ ಇಂಡಿಯಾ ಆಧ್ಯಕ್ಷ ದಿಲೀಪ್‌ ಟಿರ್ಕಿ ಅವರಿಗೆ ಸಲ್ಲಿಸಿದ್ದಾರೆ.* 2019ರ ಏಪ್ರಿಲ್‌ನಲ್ಲಿ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದ ಆಸ್ಪ್ರೇಲಿಯಾದ ರೀಡ್‌, ತಂಡಕ್ಕೆ 2021ರ ಟೋಕಿಯೋ ಒಲಿಂಪಿಕ್ಸ್‌ನ ಐತಿಹಾಸಿಕ ಕಂಚಿನ ಪದಕ ತಂದುಕೊಡಲು ನೆರವಾಗಿದ್ದರು. * ಅವರ ಅವಧಿಯಲ್ಲೇ ಭಾರತ ಕಳೆದ ವರ್ಷ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ, 2021-22ರ ಪ್ರೊ ಲೀಗ್‌ ಹಾಕಿಯಲ್ಲಿ ತೃತೀಯ ಸ್ಥಾನ ಪಡೆದಿತ್ತು. ಅವರ ಒಪ್ಪಂದ ಅವಧಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೆ ಇದ್ದರೂ ಒಂದು ವರ್ಷದ ಮೊದಲೇ ಹುದ್ದೆ ತ್ಯಜಿಸಿದ್ದಾರೆ. ವಿಶ್ವಕಪ್‌ನಲ್ಲಿ ಕ್ರಾಸ್‌ ಓವರ್ಸ್‌ನಲ್ಲಿ ಸೋತಿದ್ದ ಭಾರತ, 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.