* ಭಾರತ ಮತ್ತು ಬ್ರಿಟನ್‌ ಸೇನೆಗಳ ನಡುವೆ ನಡೆಯುವ ಪ್ರಮುಖ ದ್ವೈವಾರ್ಷಿಕ ಜಂಟಿ ಮಿಲಿಟರಿ ವ್ಯಾಯಾಮ ‘ಅಜೇಯ ವಾರಿಯರ್–25’ ಭಾನುವಾರ ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ ನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ವ್ಯಾಯಾಮವು 15 ದಿನಗಳ ಕಾಲ ನಡೆದಿದ್ದು, ಎರಡೂ ದೇಶಗಳ ಸೇನೆಗಳ ನಡುವಿನ ಯುದ್ಧತಂತ್ರ, ಕಾರ್ಯಾಚರಣಾ ಸಾಮರ್ಥ್ಯ ಮತ್ತು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಿದೆ.* ಈ ವ್ಯಾಯಾಮದಲ್ಲಿ ಪ್ರಮುಖವಾಗಿ 🔹ಲೈವ್ ಫೈರಿಂಗ್ ಅಭ್ಯಾಸಗಳು:ವಿವಿಧ ಪ್ರಕಾರದ ಶಸ್ತ್ರಾಸ್ತ್ರಗಳೊಂದಿಗೆ ನೈಜ ಯುದ್ಧದಂತಹ ತರಬೇತಿ.🔹 ಕೌಂಟರ್-ಟೆರರಿಸ್ಟ್ ಆಪರೇಶನ್‌ಗಳು:ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉಗ್ರರನ್ನು ನಿಷ್ಕ್ರಿಯಗೊಳಿಸುವ ಜಂಟಿ ಕಾರ್ಯಾಚರಣೆಗಳು.🔹 ಕಮಾಂಡ್ ಮತ್ತು ಕಂಟ್ರೋಲ್ ಅಭ್ಯಾಸಗಳು:ಎರಡೂ ಸೇನೆಗಳ ನೇತೃತ್ವದ ತಂಡಗಳು ಜಂಟಿಯಾಗಿ ಕಾರ್ಯಾಚರಣೆಗಳನ್ನು ಸಂಯೋಜಿಸಿದವು.🔹 ವೃತ್ತಿಪರ ಜ್ಞಾನ ಹಂಚಿಕೆ:ಬ್ರಿಟನ್ ಮತ್ತು ಭಾರತದ ಸೈನಿಕರು ಪರಸ್ಪರ ಅನುಭವ ಮತ್ತು ಯುದ್ಧತಂತ್ರಗಳನ್ನು ಹಂಚಿಕೊಂಡರು.* ವ್ಯಾಯಾಮದ ಪ್ರಮುಖ ಉದ್ದೇಶ ಭಯೋತ್ಪಾದನೆ ನಿರೋಧ ಕಾರ್ಯಾಚರಣೆಗಳಲ್ಲಿ ಜಂಟಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದು, ನಗರ ಹಾಗೂ ಅರಣ್ಯ ಯುದ್ಧತಂತ್ರಗಳಲ್ಲಿ ಪರಸ್ಪರ ಜ್ಞಾನ ವಿನಿಮಯ, ಸಂಯುಕ್ತ ಸೈನಿಕ ಯೋಜನೆ, ಸಂವಹನ ಮತ್ತು ನಿರ್ಧಾರ ಪ್ರಕ್ರಿಯೆಗಳ ಏಕೀಕರಣ ಹಾಗೂ ಬಹುಡೋಮೇನ್ ಕಾರ್ಯಾಚರಣೆಗಳು (Multi-domain operations) ಕುರಿತು ಸಮನ್ವಯ ಇದರ ಪ್ರಮುಖ ಉದ್ದೇಶವಾಗಿದೆ.