* ಅಂತರರಾಷ್ಟ್ರೀಯ ಸಮುದ್ರ ಸಾರಿಗೆ ಕ್ಷೇತ್ರದಲ್ಲಿ ಭಾರತದ ಪ್ರಭಾವ ಮತ್ತಷ್ಟು ಬಲವಾಗಿದ್ದು,  ಲಂಡನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (IMO) ಮಂಡಳಿ 2025–26ರ ಅವಧಿಗೆ ಮತ್ತೆ ಭಾರತವನ್ನು ಆಯ್ಕೆ ಮಾಡಲಾಗಿದೆ. ಭಾರತವು ಸಮುದ್ರ ವ್ಯಾಪಾರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ರಾಷ್ಟ್ರಗಳ ವರ್ಗ ‘B’ ಅಡಿಯಲ್ಲಿ ಸ್ಪರ್ಧಿಸಿಕೊಂಡು ಯಶಸ್ವಿಯಾಗಿದೆ.* ವರ್ಗ ‘B’ ಯಲ್ಲಿರುವ ಪ್ರಮುಖ ರಾಷ್ಟ್ರಗಳು ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಸ್ಪೇನ್, ಸ್ವೀಡನ್, ಯುನೈಟೆಡ್ ಅರಬ್ ಎಮಿರೇಟ್ಸ್ * IMO ಜಾಗತಿಕ ಸಮುದ್ರ ಸಾರಿಗೆ, ನೌಕಾಯಾನ ಸುರಕ್ಷತೆ ಮತ್ತು ಸಮುದ್ರ ಪರಿಸರ ಸಂರಕ್ಷಣೆಗಾಗಿ ನೀತಿಗಳನ್ನು ರೂಪಿಸುವ ಪ್ರಮುಖ ಅಂತರಾಷ್ಟ್ರೀಯ ಸಂಸ್ಥೆ. ಇದರ ಮಂಡಳಿ ಜಾಗತಿಕ ಕಡಲ ವಲಯದ ನೀತಿ ನಿರ್ಧಾರಗಳ ಪ್ರಮುಖ ಕೇಂದ್ರವಾಗಿದ್ದು, ಸದಸ್ಯ ರಾಷ್ಟ್ರಗಳಿಗೆ ಜಾಗತಿಕ ನೌಕಾಯಾನ ಆಡಳಿತದಲ್ಲಿ ಮಾತು, ಪ್ರಭಾವ ಮತ್ತು ಭಾಗವಹಿಸುವಿಕೆ ನೀಡುತ್ತದೆ.* ಭಾರತಕ್ಕೆ ಈ ಮರು ಆಯ್ಕೆಯ ಮಹತ್ವವು ಜಾಗತಿಕ ನೌಕಾಯಾನ ಕ್ಷೇತ್ರದಲ್ಲಿ ಭಾರತದ ಸ್ಥಾನ ಹಾಗೂ ವಿಶ್ವಾಸಾರ್ಹತೆ ಮತ್ತಷ್ಟು ಬಲಪಡುತ್ತದೆ. ಭಾರತದ ಬಂದರು ಅಭಿವೃದ್ಧಿ, ತೀರಭದ್ರತೆ ಮತ್ತು ‘ಬ್ಲೂ ಎಕಾನಮಿ’ ಯೋಜನೆಗಳಿಗೆ ಜಾಗತಿಕ ಬೆಂಬಲ ದಕ್ಕುತ್ತದೆ.* ಸಮುದ್ರ ಮಾರ್ಗಗಳ ಸುರಕ್ಷತೆ, ಪರಿಸರ ಸ್ನೇಹಿ ನೌಕಾಯಾನ ಮತ್ತು ಡಿಜಿಟಲ್ ಮೆರಿಟೈಮ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರವಹಿಸಲು ಅವಕಾಶ ಸಿಗುತ್ತದೆ.