* ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು 2030 ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ಎಸ್ &ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ತನ್ನ ಇತ್ತೀಚಿನ ಪಿಎಂಐ ಸಂಚಿಕೆಯಲ್ಲಿ ತಿಳಿಸಿದೆ.* ಭಾರತದ ಜಿಡಿಪಿಯ ಗಾತ್ರವು ಈಗಾಗಲೇ ಯುಕೆ ಮತ್ತು ಫ್ರಾನ್ಸ್ ನ ಜಿಡಿಪಿಗಿಂತ ದೊಡ್ಡದಾಗಿದೆ. ಜಿಡಿಪಿ ಜರ್ಮನಿಯನ್ನು ಮೀರಿಸುತ್ತದೆ ಎಂದು ಊಹಿಸಲಾಗಿದೆ.* ಮಾರ್ಚ್ 2024 ಕ್ಕೆ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 6.2 ರಿಂದ 6.3 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಭಾರತದ ಆರ್ಥಿಕತೆಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆ ಕಂಡಿದೆ.* 2022ರಲ್ಲಿ 3.5 ಟ್ರಿಲಿಯನ್ ಡಾಲರ್ ಇದ್ದ ಭಾರತದ ಜಿಡಿಪಿ 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ. * US ಪ್ರಸ್ತುತ USD 25.5 ಟ್ರಿಲಿಯನ್ (ಜಿಡಿಪಿ) ಯೊಂದಿಗೆ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಸುಮಾರು 18 ಟ್ರಿಲಿಯನ್ ಡಾಲರ್ ಜಿಡಿಪಿ ಗಾತ್ರದೊಂದಿಗೆ ಚೀನಾ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಇದು ಪ್ರಪಂಚದ ಜಿಡಿಪಿಯ ಸುಮಾರು 17.9 ಪ್ರತಿಶತವಾಗಿದೆ. 4.2 ಟ್ರಿಲಿಯನ್ ಡಾಲರ್  GDP ಯೊಂದಿಗೆ ಜಪಾನ್ ದೂರದ ಮೂರನೇ ಸ್ಥಾನದಲ್ಲಿದೆ.