* ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡುವ 27ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ ಬೆಂಗಳೂರು ಅರಮನೆ ಮೈದಾನದಲ್ಲಿ ಮಂಗಳವಾರ (ನ.19 ರಿಂದ 21) ಚಾಲನೆ ಸಿಗಲಿದೆ.* ಈ ಬಾರಿಯ ಟೆಕ್‌ಸಮ್ಮಿಟ್ ಅನ್‌ಬೌಂಡ್ (ಅನಿಯಮಿತ) ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ.* ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಸ್ಟಾರ್ಟ್‌ ಅಪ್‌ಗಳ ಸರ್ವತೋಮುಖ ಅಭಿವೃದ್ಧಿಯನ್ನು ಮುಖ್ಯ ಉದ್ದೇಶವಾಗಿಸಿ ಕೊಂಡು ಟೆಕ್ ಶೃಂಗದಲ್ಲಿ ಜಾಗತಿಕ ಪಾಲುದಾರಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು IT, BT ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.* ತಾಂತ್ರಿಕ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅದನ್ನು ಮತ್ತಷ್ಟು ಉತ್ತಮಗೊಳಿಸಲು ಟೆಕ್ ಶೃಂಗ ನೆರವಾಗಲಿದೆ.* ಟೆಕ್ ಶೃಂಗಕ್ಕೆ ಆಸ್ಟ್ರೇಲಿಯಾ ಪಾಲುದಾರಿಕೆಯನ್ನು ಹೊಂದಿದೆ. ಅದರ ಜತೆಗೆ ಯುನೈಟೆಡ್ ಕಿಂಗ್ ಡಂ, ಪ್ರಾನ್ಸ್, ಅಮೆರಿಕ, ಆಸ್ಟ್ರಿಯಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ಪಿಟ್ಟರ್‌ಲ್ಯಾಂಡ್, ಇಸ್ರೇಲ್ ಸೇರಿದಂತೆ 15ಕ್ಕೂ ಹೆಚ್ಚಿನ ದೇಶಗಳ ಉನ್ನತ ಮಟ್ಟದ ನಿಯೋಗ, ಅಧಿಕಾರಿಗಳು, ಖಾಸಗಿ ಸಂಸ್ಥೆಗಳು ಪಾಲ್ಗೊಳ್ಳಲಿವೆ.* ಟೆಕ್ ಶೃಂಗದಲ್ಲಿ ಐಟಿ, ಡೀಪ್‌ ಟೆಕ್ ಮತ್ತು ಟ್ರೆಂಡ್ಸ್, ಬಯೋಟೆಕ್, ಹೆಲ್ತ್‌ ಟೆಕ್, ಸ್ಮಾರ್ಟ್‌ಆ್ಯಪ್ ಎಕೋಸಿಸ್ಟಂ, ಗ್ಲೋಬಲ್ ಇನೋವೇಶನ್ ಅಲಯನ್ಸ್, ಭಾರತ ಮತ್ತು ಯುಎಸ್ಎ ಟೆಕ್ ಕಾನ್‌ಕ್ಲೀವ್, ಎಲೆಕ್ಟೋ- ಸಮಿಕಾನ್ ಟ್ರ್ಯಾಕ್ ಕುರಿತಂತೆ ಸಮ್ಮೇಳನ ನಡೆಯಲಿದೆ.* ಇದೇ ಮೊದಲ ಬಾರಿಗೆ ಕಳೆ ಬಾರಿಯ ಶೃಂಗದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.