* ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಕರ್ನಾಟಕ ಸರಕಾರವು ಇದೇ ಮೊದಲ ಬಾರಿಗೆ ಬೆಂಗಳೂರು ಡಿಜಿಟಲ್ ಜನಸಂಖ್ಯಾ ಗಡಿಯಾರನ್ನು ಆರಂಭಿಸಿದೆ.* ಗಡಿಯಾರವು ಕರ್ನಾಟಕ ಮತ್ತು ಭಾರತದ ನೈಜ-ಸಮಯದ ಜನಸಂಖ್ಯೆಯ ಅಂದಾಜುಗಳನ್ನು ಪ್ರದರ್ಶಿಸುತ್ತದೆ. ಇದು ಜನಸಂಖ್ಯೆಗೆ ಸಂಬಂಧಿಸಿದ ಸಂಶೋಧನೆಗಾಗಿ ನಿಗದಿತ ಅಂಕಿ-ಅಂಶಗಳನ್ನು ಒದಗಿಸಲಿದೆ.* ಡಿಜಿಟಲ್ ಜನಸಂಖ್ಯಾ ಗಡಿಯಾರವು ಪ್ರತಿ ಎರಡು 1 ಸೆಕೆಂಡ್‌ ಭಾರತದ ಒಟ್ಟು ಮಾಹಿತಿಯನ್ನು ಒದಗಿಸುತ್ತದೆ. ಹಾಗೆಯೇ, ಪ್ರತಿ ಹತ್ತು ಸೆಕೆಂಡ್‌ ಗಳಲ್ಲಿ ಕರ್ನಾಟಕದ ಒಟ್ಟು ಜನಸಂಖ್ಯೆಯ ಅಂಕಿ-ಅಂಶಗಳನ್ನು ನವೀಕರಿಸುತ್ತದೆ.* ಉಪಗ್ರಹ ಸಂಪರ್ಕದ ಮೂಲಕ ಕಾರ್ಯನಿರ್ವಹಿಸುವ ಈ ಗಡಿಯಾರವು ನಿಖರ ಮಾಹಿತಿಯನ್ನು ಒದಗಿಸಲಿದೆ. ನೈಜ ಸಮಯದಲ್ಲಿ ಜನಸಂಖ್ಯೆಯಲ್ಲಿ ಆಗುವ ಬದಲಾವಣೆಗಳ ಪ್ರಮುಖ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬೆಂಗಳೂರು ಮಾತ್ರವಲ್ಲದೆ, ದೇಶದಾದ್ಯಂತ 18 ಜನಸಂಖ್ಯಾ ಸಂಶೋಧನಾ ಕೇಂದ್ರಗಳಲ್ಲಿ ಈ ರೀತಿಯ ಗಡಿಯಾರಗಳನ್ನು ಅಳವಡಿಸಲು ಯೋಜಿಸಿದೆ.* ರಾಷ್ಟ್ರವ್ಯಾಪಿ ಜನಸಂಖ್ಯಾ ಬದಲಾವಣೆಗಳ ಕುರಿತು ಮಾಹಿತಿ ಒದಗಿಸುವ ಈ ಗಡಿಯಾರಗಳು ಸಂಶೋಧಕರು ನೀತಿ ನಿರೂಪಕರಿಗೆ ಪ್ರಮುಖ ಸಾಧನಗಳಾಗಲಿವೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯು ಗಡಿಯಾರದ ಜತೆಗೆ ಹೊಸ ಜನಗಣತಿ ಡೇಟಾ ಸಂಶೋಧನಾ ಕಾರ್ಯಕ್ಷೇತ್ರವನ್ನು ಪರಿಚಯಿಸಲಿದೆ. ಇದು ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಸಮಗ್ರ ಜನಗಣತಿ ಕುರಿತ ಮಾಹಿತಿ ನೀಡಲಿದೆ. ಇದರಿಂದಾಗಿ ಕೇಂದ್ರ ಸರಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ನೆರವಾಗಲಿದೆ.* ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಹಾ ನಿರ್ದೇಶಕ ಕಲ್ ಸಿಂಗ್ ಅವರು ಈ ಹೊಸ ಗಡಿಯಾರವನ್ನು ಉದ್ಘಾಟಿಸಿದ್ದರು.