* ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ, ಪುತ್ತೂರು ಉಪವಿಭಾಗಾಧಿಕಾರಿ ಕಚೇರಿಯಿಂದ ದಿ.ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ನೀಡಲಾಗುವ 'ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿ'ಗೆ ಬೆಂಗಳೂರಿನ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.* ಅಕ್ಟೋಬರ್ .10ರಂದು ಬಾಲವನದಲ್ಲಿ ನಡೆಯುವ 'ಕೋಟ ಶಿವರಾಮ ಕಾರಂತ' ಜನ್ಮದಿನೋತ್ಸವದಂದು   ಈ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಪ್ರಶಸ್ತಿಯು 725 ಸಾವಿರ ನಗದು, ಕಾರಂತರ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.* ಶಾಸಕ ಅಶೋಕ್‌ಕುಮಾರ್ ರೈ ಅಧ್ಯಕ್ಷರಾಗಿರುವ, ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಎಂ., ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿ, ವಕೀಲ ಬೆಟ್ಟ ಈಶ್ವರ ಭಟ್, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸದಸ್ಯರಾಗಿರುವ ಸಮಿತಿಯು ಈ ಪ್ರಶಸ್ತಿಗೆ ಕೆ.ಚಂದ್ರನಾಥ ಅವರನ್ನು ಆಯ್ಕೆ ಮಾಡಿದೆ.