* ಸಂಕಷ್ಟ ಮತ್ತು ವಿವಾದಗಳಿಂದ ಜರ್ಝರಿತವಾಗಿರುವ ಬೈಜುಸ್ ಸಂಸ್ಥೆಯ ಸಿಇಒ ಅರ್ಜುನ್ ಮೋಹನ್ (Arjun Mohan) ಸಿಇಒ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ. ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರೇ ಸಿಇಒ ಆಗಿ ಕಂಪನಿಯ ಚುಕ್ಕಾಣಿ ಹಿಡಿಯುತ್ತಿದ್ದಾರೆ. * ಕಳೆದ 2023ರ ಸೆಪ್ಟೆಂಬರ್‌ನಲ್ಲಿ ಅರ್ಜುನ್ ಮೋಹನ್  ಸಿಇಓ ಆಗಿ ನೇಮಕಗೊಂಡಿದ್ದರು. ಒಂದು ವರ್ಷ ಪೂರೈಸುವ ಮುನ್ನವೇ ರಾಜೀನಾಮೆ ನೀಡಿ ಪದತ್ಯಾಗ ಮಾಡಿದ್ದಾರೆ. * ನಿರ್ಗಮಿತ ಅರ್ಜುನ್ ಮೋಹನ್ ಅವರು ಬಾಹ್ಯ ಸಲಹೆಗಾರರಾಗಿ ಬೈಜೂಸ್ ಜೊತೆ ಸಂಬಂದ ಹೊಂದಿರಲಿದ್ದಾರೆ. ಆಡಳಿತ ನಿರ್ಧಾರಗಳಲ್ಲಿ ಅವರ ಪಾತ್ರ ಇರುವುದಿಲ್ಲ.  ರವೀಂದ್ರನ್ ಅವರು ಈಗ ದೈನಂದಿನ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.* ಬೈಜುಸ್ ಲರ್ನಿಂಗ್ ಆ್ಯಪ್, ಆನ್ಲೈನ್ ಕ್ಲಾಸ್ ಮತ್ತು ಟ್ಯೂಷನ್ ಕ್ಲಾಸ್ ಹಾಗು ಟೆಸ್ಟ್ ಪ್ರಿಪರೇಶನ್ ಹೀಗೆ ಮೂರು ಘಟಕಗಳಾಗಿ ಬೈಜುಸ್ ನಿರ್ವಹಣೆ ಆಗಲಿದೆ. ಈ ಮೂರು ಘಟಕಗಳು ಪ್ರತ್ಯೇಕ ನಾಯಕತ್ವದೊಂದಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿವೆ.