Job Description: * 2019ರ ನ.9ರಂದು ಸುಪ್ರೀಂ ಕೋರ್ಟ್‌ನಿಂದ ದಶಕಗಳ ಹಳೆಯ ರಾಮಜನ್ಮಭೂಮಿ ಕೇಸ್‌ನ ತೀರ್ಪು ಹೊರಬಿದ್ದಿತ್ತು . ರಾಮಜನ್ಮಭೂಮಿ ಕೇಸ್‌ನ ನಾಲ್ಕನೇ ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಯಿತು.* ಸಚಿವ ಸಂಪುಟ ಸಭೆ ವೇಳೆ ಅಯೋಧ್ಯೆ ಅಭಿವೃದ್ಧಿಗೆ ಸಂಬಂಧಿತ 10 ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.* ಯಾತ್ರಾರ್ಥಿಗಳಿಗೆ 'ಅಯೋಧ್ಯಾ ಧಾಮ್' ನಿರ್ಮಾಣ, ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರದ ವಿಸ್ತರಣೆ, ಅಯೋಧ್ಯೆಯ ಪೌರಾಣಿಕ ಹಾಗೂ ರಾಜಕೀಯ ಇತಿಹಾಸದ ಬಗ್ಗೆ ಸಂಗ್ರಹಾಲಯ ನಿರ್ಮಾಣ, ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಳಕ್ಕೆ ಆದ್ಯತೆ, 'ಸೋಲಾರ್ ಸಿಟಿ' ಮಾದರಿಯಲ್ಲಿ ಪ್ರತಿ ಮನೆಗೆ ಸೌರಶಕ್ತಿಯ ಲಾಭ ಸಿಗುವಂತೆ ಯೋಜನೆ ಜಾರಿಗೆ ತರಲು ರೂಪುರೇಷೆ ಸಿದ್ಧಪಡಿಸಲು ನಿರ್ಣಯಿಸಲಾಯಿತು.