Job Description: * ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪನೆ ಮಾಡಲು ಕರ್ನಾಟಕದ ಕಲಾವಿದ ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಘೋಷಿಸಿದೆ.* ಮೊದಲು ಏಳು ಮಂದಿ ದೇಶದ ಶ್ರೇಷ್ಟ ಕಲಾವಿದರ ಪಟ್ಟಿಯನ್ನು ಆಯ್ಕೆ ಮಾಡಿ ಆನಂತರ ಮೂವರಿಗೆ ಬಾಲರಾಮನ ಪ್ರತಿಮೆ ಸ್ಥಾಪನೆ ಜವಾಬ್ದಾರಿ ನೀಡಲಾಗಿತ್ತು. ಇದರಲ್ಲಿ ಅರುಣ್‌ ಯೋಗಿರಾಜ್‌, ಕುಮಟಾದ ಜಿ.ಎಸ್‌.ಭಟ್‌ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಬಾಲರಾಮಮೂರ್ತಿ ರೂಪಿಸಿದ್ದರು. ಟ್ರಸ್ಟ್ ರಚಿಸಿದ ಸಮಿತಿ ಸದಸ್ಯರು ಮತದಾನ ಮಾಡುವ ಮೂಲಕ ಮೂವರಲ್ಲಿ ಅರುಣ್‌ ಯೋಗಿರಾಜ್‌ ಮೂರ್ತಿಯನ್ನೇ ಅಂತಿಮಗೊಳಿಸಲಾಗಿದೆ.* ಮೈಸೂರಿನ ಎಚ್‌ಡಿ ಕೋಟೆಯಿಂದ ಆಯ್ಕೆ ಮಾಡಲಾಗಿದ್ದ ಕಪ್ಪು ಶಿಲೆಯಲ್ಲಿಯೇ ಅರುಣ್ ಯೋಗಿರಾಜ್ ಬಹುತೇಕ ಒಂದು ತಿಂಗಳಿಂದ ಅಯೋಧ್ಯೆಯಲ್ಲಿಯೇ ವಾಸ್ತವ್ಯ ಹೂಡಿ ವಿಗ್ರಹ ರೂಪಿಸಿದ್ದಾರೆ.* ಸುಮಾರು ಐದು ಅಡಿಯಷ್ಟು ಎತ್ತರವಿರುವ ಈ ಬಾಲ ರಾಮನ ವಿಗ್ರಹ ವಿಶೇಷವಾಗಿದೆ. ರಾಮನೊಂದಿಗೆ ಸೀತಾ, ಲಕ್ಷ್ಮಣ ಮತ್ತು ರಾಮನ ಭಂಟ ಹನುಮಂತನೂ ಕುಳಿತಿರುವ ವಿಗ್ರಹದಲ್ಲಿ ರಾಮನ ಮುಖಭಾವ ಮುಗ್ದವಾಗಿದೆ. ಗಂಭೀರತೆಯನ್ನು ಒಳಗೊಂಡಿದೆ. ಕಲ್ಲಿನ ಬಳಕೆ, ರಾಮನ ಮುಖಭಾವಗಳನ್ನು ಆಧರಿಸಿಯೇ ಅರುಣ್‌ ಯೋಗಿರಾಜ್‌ ರೂಪಿಸಿರುವ ವಿಗ್ರಹ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಆಯ್ಕೆಮಾಡಿದೆ. * ಮೈಸೂರಿನ ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆ ಹೊಂದಿರುವ ಅರುಣ್ ಯೋಗಿರಾಜ್ ಪ್ರಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿ ಯಾಗಿದ್ದಾರೆ.* ಅರುಣ್ ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರಿಂದ ಪೋಷಕರಾಗಿದ್ದರು. ಈ ತಲೆಮಾರಿನವರಾದ ಅರುಣ್ ಯೋಗಿರಾಜ್ ಅವರು ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು.