* ಭಾರತದ ಪ್ಯಾರಾ-ಅಥ್ಲೆಟಿಕ್ಸ್ ತಂಡವು ಅತ್ಯುತ್ತಮ ಪ್ರದರ್ಶನಕ್ಕೆ ಸಜ್ಜಾಗಿದೆ. ಪ್ಯಾರಾಲಿಂಪಿಕ್ ಕ್ರೀಡಾಕೂಟದ ಅಥ್ಲೆಟಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಐದು ಚಿನ್ನ ಸೇರಿದಂತೆ ಹತ್ತು ಪದಕಗಳನ್ನು ಜಯಿಸುವುದು ಖಚಿತ ಎಂದು ಪ್ಯಾರಾ ಅಥ್ಲೆಟಿಕ್ಸ್ ಮುಖ್ಯ ಕೋಚ್ ಸತ್ಯನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.* ಕಳೆದ ಬಾರಿ ಟೋಕಿಯೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ಗಳು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಈ ಬಾರಿ ಆ ಪದಕಗಳನ್ನು ಬಂಗಾರದ ಬಣ್ಣಕ್ಕೆ ಪರಿವರ್ತಿಸುವ ಗುರಿ ನಮ್ಮದು' ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.* ಈ ಬಾರಿ ಎಲ್ಲ ಅಥ್ಲೆಟ್‌ಗಳಿಗೂ ಬಹಳ ವಿಶೇಷವಾದ ಮತ್ತು ನಿರ್ದಿಷ್ಟ ತಂತ್ರಗಾರಿಕೆಗಳೊಂದಿಗೆ ತರಬೇತಿ ನೀಡಲಾಗಿದೆ. ತಂಡದ ಎಲ್ಲ ಸದಸ್ಯರೂ ಪ್ಯಾರಿಸ್ ತೆರಳಿದ್ದಾರೆ. ಅಲ್ಲಿಯ ವಾತಾವರಣ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ. ಜೊತೆಗೆ ಅಭ್ಯಾಸವನ್ನೂ ಮುಂದುವರಿಸಿದ್ದಾರೆ' ಎಂದು ವಿವರಿಸಿದ್ದಾರೆ.* ಸುಮಿತ್ ಆಂಟಿಲ್ ಮತ್ತು ಮರಿಯಪ್ಪನ್ ತಂಗವೇಲು ಅವರಂತಹ ಉನ್ನತ ನಿರೀಕ್ಷೆಗಳನ್ನು ಒಳಗೊಂಡಿದೆ.* ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ವೀಕ್ಷಿಸಲು 20ಲಕ್ಷ ಮಂದಿ ಟಿಕೆಟ್ ಕಾಯ್ದಿರಿಸಿದ್ದಾರೆ.