* ಅಸ್ಸಾಂ ಒಪ್ಪಂದದ  ಪ್ರಕಾರ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆಯ ಸೆಕ್ಷನ್ 6A ಸಂವಿಧಾನಿಕ ಸಿಂಧುತ್ವ ನೀಡುವುದಕ್ಕೆ ಸುಪ್ರೀಂನಿಂದ ಸಮ್ಮತಿ ಸಿಕ್ಕಿದೆ.* ಈ ಕಾಯ್ದೆಯಡಿ 1966ರ ಜನವರಿ 1ರಿಂದ 1971ರ ಮಾರ್ಚ್‌ 25ರ ನಡುವೆ ಅಸ್ಸಾಂಗೆ ಬಂದಿರುವ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ಅವಕಾಶ ಕಲ್ಪಿಸುತ್ತದೆ.* ವಿಶೇಷವಾಗಿ ಈ ಅವಧಿಯಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಗೆ ಈ ಸೆಕ್ಷನ್‌ನ ಪ್ರಯೋಜನ ಸಿಗುತ್ತದೆ.* ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯ ಮೂರ್ತಿಗಳಾದ ಸೂರ್ಯಕಾಂತ, ಎಂ. ಎಂ ಸುಂದರೇಶ್ ಜೆ.ಬಿ.ಪಾದ್ರಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನೇತೃತ್ವದ ಪೀಠದಿಂದ ಈ ಮಹತ್ವದ ನಿರ್ಧಾರ ಹೊರಬಿದ್ದಿದ್ದು, 4:1ರ ಬಹುಮತದೊಂದಿಗೆ ಸೆಕ್ಷನ್ ಪರವಾಗಿ ತೀರ್ಪು ನೀಡಿದೆ.* ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮಾತ್ರ ಬಹುಮತದ ನಿರ್ಧಾರವನ್ನು ಒಪ್ಪಲಿಲ್ಲ. 5 ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ಡಿಸೆಂಬರ್ 12 ರಂದು ಪ್ರಕರಣದ ವಿಚಾರಣೆಯ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.* ಅಸ್ಸಾಂನಲ್ಲಿ ಸ್ಥಳೀಯ ಜನಸಂಖ್ಯೆಯಲ್ಲಿ ವಲಸಿಗರ ಪ್ರಮಾಣವು ಇತರ ಗಡಿ ರಾಜ್ಯಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ಬಾಂಗ್ಲಾ ದೇಶದೊಂದಿಗೆ ಹೆಚ್ಚಿನ ಗಡಿಯನ್ನು ಹಂಚಿಕೊಂಡಿರುವ ಇತರ ರಾಜ್ಯಗಳಿಗಿಂತ ಅಸ್ಸಾಂ ಅನ್ನು ಪ್ರತ್ಯೇಕಿಸುವುದು ವಿವೇಕಯುತವಾಗಿದೆಯೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.