Job Description: * ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(APEDA-ಅಪೆಡ) ಸ್ಥಾಪನೆಗೊಂಡು 37 ಪೂರ್ಣಗೊಂಡಿವೆ.* 2000-2001ರಲ್ಲಿ 0.6 ಶತಕೋಟಿ ಡಾಲರ್ ಇದ್ದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಗಳನ್ನು, 2021-22 ಕ್ಕೆ ಹೋಲಿಸಿದಾಗ 24.77 ಶತಕೋಟಿ ಡಾಲರ್ ನಷ್ಟು ಹೆಚ್ಚಾಗಿದೆ.* ಟ್ರೇಸಬಿಲಿಟಿ ವ್ಯವಸ್ಥೆಯನ್ನು ಸಾವಯವ ಉತ್ಪನ್ನಗಳಿಗೆ (ಟ್ರೇಸ್ ನೆಟ್- ಅಂತರ್ಜಾಲ ಆಧರಿತ ವಿದ್ಯುನ್ಮಾನ ಸೇವೆಯಿಂದ ಸಂಸ್ಕರಿತ ಆಹಾರ ಉತ್ಪನ್ನಗಳ ಗುಣಮಟ್ಟ ಪತ್ತೆ), ಕಡಲೆಕಾಯಿ(Peanut.net) ಮತ್ತು ಮಾಂಸ ಉತ್ಪನ್ನಗಳಿಗೆ (Meat.net) ವಿಸ್ತರಿಸಿದೆ. ಅಪೆಡ 2005-06ರಲ್ಲಿ ಐರೋಪ್ಯ ಒಕ್ಕೂಟಕ್ಕೆ ದ್ರಾಕ್ಷಿ ರಫ್ತು ಪರಿಚಯಿಸುವುದರೊಂದಿಗೆ ತೋಟಗಾರಿಕೆ ಉತ್ಪನ್ನಗಳಿಗೆ ಟ್ರೇಸಬಿಲಿಟಿ(ಗುಣಮಟ್ಟ ಪತ್ತೆ ಹಚ್ಚುವಿಕೆ) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರವರ್ತಕ ಸಂಸ್ಥೆಯಾಗಿ ಹೊರಹೊಮ್ಮಿದೆ. * ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳು ರಫ್ತುದಾರರೊಂದಿಗೆ ಸಂವಹನ ನಡೆಸಲು ಸೂಕ್ತ ವೇದಿಕೆ ಒದಗಿಸಲು ಅಪೆಡ, ತನ್ನ ವೆಬ್‌ಸೈಟ್‌ನಲ್ಲಿ ರೈತ ಸಂಪರ್ಕ ಪೋರ್ಟಲ್ ಸ್ಥಾಪಿಸಿದೆ.