* ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಕಾಲಿನ್ ಮನ್ರೋ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (ಶುಕ್ರವಾರ) ಮೇ 10ರಂದು ನಿವೃತ್ತಿ ಘೋಷಿಸಿದ್ದಾರೆ.* ಕಾಲಿನ್ ಮುನ್ರೊ ನ್ಯೂಜಿಲೆಂಡ್ ಪರ 3000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅವರು ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಮುನ್ರೋ ಭರ್ಜರಿ ಶತಕ ಸಿಡಿಸಿದ್ದರು.* ಕಾಲಿನ್ ಮುನ್ರೊ ನ್ಯೂಜಿಲೆಂಡ್ ಪರ ಈವರೆಗೆ ಒಟ್ಟು 65 ಟಿ20, 57 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ 3 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕಾಲಿನ್‌ ಮನ್ರೊ ಅವರು ಪಾತ್ರರಾಗಿದ್ದಾರೆ. * 2017ರ ನವೆಂಬರ್‌’ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟಿ20 ಸರಣಿ ನಡೆದಿತ್ತು. ಇದರ ಎರಡನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 196 ರನ್ ಗಳಿಸಿತು. ಈ ವೇಳೆ ಮುನ್ರೊ 58 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದ್ದರು. * ಈ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್‌’ಗಳನ್ನು ಬಾರಿಸಿದ್ದರು. ನ್ಯೂಜಿಲೆಂಡ್ ನೀಡಿದ ಗುರಿ ಬೆನ್ನತ್ತಿದ್ದ ಭಾರತ ತಂಡ ಕೇವಲ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 40 ರನ್‌ಗಳಿಂದ ಸೋಲನುಭವಿಸಿತ್ತು.