* ಸಂಸತ್ತಿನಲ್ಲಿ ಮಂಡಿಸಿದ ರಾಷ್ಟ್ರೀಯ ಅಂಗಾಂಶ ಕಸಿ ಸಂಸ್ಥೆಯ ಅಂಕಿಅಂಶಗಳಿಂದ ಮೃತ ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ಮತ್ತು ಮೃತ ದಾನಿಗಳ ಕಸಿಯಲ್ಲಿ(Organ donation) ಕರ್ನಾಟಕ ರಾಜ್ಯವು(Karnataka) ಭಾರತದಲ್ಲಿ ಮೂರನೇ ಸ್ಥಾನದಲ್ಲಿದೆ. * ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯು 2023ರ ಸೆಪ್ಟೆಂಬರ್ ನಲ್ಲಿ ಅಂಗಾಂಗ ದಾನ ನೋಂದಣಿ ಅಭಿಯಾನ ಆರಂಭಿಸಿತು. 14 ತಿಂಗಳಲ್ಲಿ ದೇಶಾದ್ಯಂತ 1.96 ಲಕ್ಷ ಜನ ಹೆಸರು ನೋಂದಾಯಿಸಿದ್ದಾರೆ. ಹೀಗೆ ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿದ ದೇಶದ ಟಾಪ್ 5 ಜಿಲ್ಲೆಗಳಲ್ಲಿ ಕರ್ನಾಟಕದ ಬಳ್ಳಾರಿ ಮೊದಲು ಹಾಗೂ ಧಾರವಾಡ ಜಿಲ್ಲೆ 5ನೇ ಸ್ಥಾನ ಪಡೆದಿದೆ. * ಅಭಿಯಾನ ಆರಂಭಗೊಂಡ ನಂತರ (ನ.14ರವರೆಗೆ) 13,518 0 ಮಹಿಳೆಯರು, 10,852 ಪುರುಷರು ಸೇರಿ ಒಟ್ಟು 24. 373 ಜನರು ಅಂಗಾಂಗ ದಾನಕ್ಕೆ ಹೆಸರನ್ನ ನೊಂದಾಯಿಸಿದ್ದಾರೆ. ಇದರಲ್ಲಿ 17,127 ಜನರು 45 ವರ್ಷ ವಯಸ್ಸಿನವರಿದ್ದು 18-10 ಯಾವಸ್ಸಿನ 5,804 ಜನರು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಈಗಲೂ ಆಧಾರ್ ದೃಢೀಕರಣದ ಸೈನ್ ಅಪ್ ಮೂಲಕ ವೆಬ್‌ಸೈಟ್‌ನಲ್ಲಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಬಹುದು.* ಕರ್ನಾಟಕದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ. ಆದರೆ, ಉತ್ತರ ಕರ್ನಾಟಕದ 13 ಜಿಲ್ಲೆಗಳ ಪೈಕಿ ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆ - ಹೊರತುಪಡಿಸಿ ಉಳಿದ ಕಡೆ ಅಂಗಾಂಗ ದಾನಕ್ಕೆ ಮಹಿಳೆಯರು ಅಷ್ಟೊಂದು ಉತ್ಸಾಹ ತೋರಿಲ್ಲ* ಅಂಗಾಂಗ ದಾನ ನೋಂದಣಿ ಅಭಿಯಾನ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ನಿತ್ಯವೂ 400ರವರೆಗೂ ನೋಂದಣಿ ಆಗಿದೆ.* ಕರ್ನಾಟಕದಲ್ಲಿನ ಟಾಪ್ 5 ನೋಂದಣಿ ಜಿಲ್ಲೆಗಳು : - ಬಳ್ಳಾರಿ : 4,767- ಧಾರವಾಡ : 3,085- ಬೆಂ. ನಗರ : 1,982- ಕೋಲಾರ್ : 1,749- ದಕ್ಷಿಣ ಕನ್ನಡ : 1,305
* ಅಂಗಾಂಗ ದಾನ ನೋಂದಣಿ ಭಾರತದ ಟಾಪ್ 5 ರಾಜ್ಯಗಳು- ರಾಜಸ್ಥಾನ : 40,331- ಮಹಾರಾಷ್ಟ್ರ : 30,745- ಕರ್ನಾಟಕ : 24,372- ಮಧ್ಯಪ್ರದೇಶ : 21,464- ತೆಲಂಗಾಣ : 13,551