* ಕೇಂದ್ರ ಸರ್ಕಾರದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ದೇಶದ 508 ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 6 ರಂದು ಚಾಲನೆ ನೀಡಿದ್ದಾರೆ.* ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ 25,000 ಕೋಟಿ ವೆಚ್ಚದಲ್ಲಿ ದೇಶದ 508 ರೈಲ್ವೆ ನಿಲ್ದಾಣಗಳು ಪುನರಾಭಿವೃದ್ದಿಯ ಯೋಜನೆಯಾಗಿದೆ.* ಈ ಯೋಜನೆಯಡಿ ಕರ್ನಾಟಕದ 55 ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಯೋಜಿಸಲಾಗಿದ್ದು, ಮೊದಲ ಹಂತದಲ್ಲಿ ರೂ 303 ಕೋಟಿ ವೆಚ್ಚದಲ್ಲಿ 13 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.* ಕರ್ನಾಟಕದಲ್ಲಿ ಪುನರಾಭಿವೃದ್ದಿಗೊಳ್ಳಲಿರುವ 13 ರೈಲ್ವೆ ನಿಲ್ದಾಣಗಳು - ಬಳ್ಳಾರಿ,ಘಟಪ್ರಭಾ, ಗೋಕಾಕ್ ರೋಡ, ಬೀದರ್, ಮಂಗಳೂರು ಜಂಕ್ಷನ್, ಹರಿಹರ, ಅಳ್ನಾವರ, ಗದಗ, ಅರಸೀಕೆರೆ, ವಾಡಿ, ಮತ್ತು ಕಲಬುರಗಿ ಜಂಕ್ಷನ್ (ಗುಲ್ಬರ್ಗ), ಶಹಾಬಾದ್, ಕೊಪ್ಪಳ