Job Description: * ಸೂರ್ಯನ ಕರೋನದಲ್ಲಿನ ದೊಡ್ಡ ರಂಧ್ರವು, ಪ್ರಬಲವಾದ ಭೂಕಾಂತೀಯ ಚಂಡಮಾರುತವನ್ನು ಉಂಟುಮಾಡಿದೆ. ಇದು ಭೂಮಿಯ ಕಾಂತಕ್ಷೇತ್ರವನ್ನು ಗಂಭೀರವಾಗಿ ನಶಗೊಳಿಸಿದ್ದು, ಇದರಿಂದಾಗಿ ಭವ್ಯವಾದ ನಾರ್ದರ್ನ್ ಲೈಟ್ಸ್(ಅರೋರಾ) ಪ್ರದರ್ಶನಕ್ಕೆ ಅಮೆರಿಕವು ಸಾಕ್ಷಿಯಾಗಿದೆ.*ಅರೋರಾ ಎಂದರೇನು?* ನಾಸಾದ ಪ್ರಕಾರ, ಭೂಮಿಯ ಉತ್ತರ ಅಥವಾ ದಕ್ಷಿಣ ಧ್ರುವದ ಸಮೀಪ ಹೆಚ್ಚಾಗಿ ಕಂಡುಬರುವ ಅರೋರಾ ವಿದ್ಯಮಾನ, ಆಗಾಆಗೆ ಆಕಾಶದಲ್ಲಿ ಸುಂದರವಾದ ಬೆಳಕಿನ ಪ್ರದರ್ಶನ ಏರ್ಪಡಿಸುತ್ತದೆ. ಉತ್ತರ ಧ್ರುವದಲ್ಲಿ ಘಟಿಸುವ ಈ ವಿದ್ಯಮಾನವನ್ನು ಅರೋರಾ ಅಥವಾ ಉತ್ತರ ದೀಪಗಳು ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ. ಅದೇ ರೀತಿ ದಕ್ಷಿಣ ಧ್ರುವದಲ್ಲಿ ಘಟಿಸುವ ಈ ವಿದ್ಯಮಾನವನ್ನು ಅರೋರಾ ಆಸ್ಟ್ರೇಲಿಸ್ ಅಥವಾ ದಕ್ಷಿಣದ ದೀಪಗಳು ಎಂದು ಕರೆಯುವರು.