* ಖ್ಯಾತ ಲೇಖಕಿ ಅರುಂಧತಿ ರಾಯ್‌ ಅವರು ಅಮೆರಿಕಾದ ಲಾಭೋದ್ದೇಶ ರಹಿತ ಸಂಸ್ಥೆ ವಕ್ಲಾವ್‌ ಹೇವೆಲ್‌ ಸೆಂಟರ್‌ ನೀಡುವ 2024 “ಡಿಸ್ಟರ್ಬಿಂಗ್‌ ದಿ ಪೀಸ್” (Disturbing the Peace") Award ಪ್ರಶಸ್ತಿಯನ್ನು ಗಳಿಸಿದ್ದಾರೆ. * ರಾಯ್‌ ಅವರು ಈ ಪ್ರಶಸ್ತಿಯನ್ನು ಇರಾನಿಯನ್‌ ರ‍ಯಾ ಪರ್‌ ತೂಮಜ್‌ ಸಲೇಹಿ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇರಾನ್‌ ಸರ್ಕಾರದ ರಾಜಕೀಯ ದೌರ್ಜನ್ಯವನ್ನು ಖಂಡಿಸಿರುವ ಹಾಡುಗಳಿಗಾಗಿ ಸಲೇಹಿ ಖ್ಯಾತಿ ಪಡೆದಿದ್ದಾರೆ. * ಪ್ರಶಸ್ತಿಯನ್ನು ಪ್ರಕಟಿಸಿದ ತೀರ್ಪುಗಾರರ ಸದಸ್ಯ ಸಲೀಲ್ ತ್ರಿಪಾಠಿ, "ಅರುಂಧತಿ ರಾಯ್ ಭಾರತದ ಅಂಚಿನಲ್ಲಿರುವ ಮತ್ತು ನಿರಾಶ್ರಿತ ಜನರ ಪರವಾಗಿ ಮಾತನಾಡುತ್ತಾರೆ" ಎಂದು ಹೇಳಿದರು.* ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿಶ್ವದಾದ್ಯಂತದ ಬರಹಗಾರರನ್ನು ಪ್ರೇರೇಪಿಸುವ ಉದ್ದೇಶದಿಂದ ವ್ಯಾಕ್ಲಾವ್ ಹ್ಯಾವೆಲ್ ಸೆಂಟರ್ ಪ್ರತಿ ವರ್ಷ ಈ ಪ್ರಶಸ್ತಿಯನ್ನು ಘೋಷಿಸುತ್ತದೆ. ಪ್ರಶಸ್ತಿ ಮೊತ್ತ $5,000 (ಅಂದಾಜು ರೂ. 4.19 ಲಕ್ಷ).