* 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ (ಆಗಸ್ಟ್ 16 2024) ಘೋಷಣೆಯಾಗಿದೆ. ಕನ್ನಡದ ನಟ ರಿಷಬ್ ಶೆಟ್ಟಿ ಹಾಗೂ ಯಶ್ ನಟನೆಯ ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾಗೆ ಪ್ರಶಸ್ತಿ ಲಭಿಸಿದೆ.* ಕನ್ನಡದ “ಕಾಂತಾರ” ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮಿಳು ಚಿತ್ರ ‘ತಿರುಚಿತ್ರಂಬಲಂ’ಗಾಗಿ ನಿತ್ಯಾ ಮೆನೆನ್ ಮತ್ತು ಗುಜರಾತಿ ಚಿತ್ರ “ಕಚ್ ಎಕ್ಸ್‌ಪ್ರೆಸ್” ಗಾಗಿ ಮಾನಸಿ ಪರೇಖ್ ಹಂಚಿಕೊಂಡಿದ್ದಾರೆ.* 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಏಳು ಪ್ರಶಸ್ತಿಗಳು ಲಭಿಸಿವೆ. * ರಿಷಬ್‌ ಶೆಟ್ಟಿ ನಿರ್ದೇಶನದ ಜತೆಗೆ ನಟಿಸಿದ್ದ ಕಾಂತಾರ ಚಿತ್ರಕ್ಕೆ ಬರೀ ಅತ್ಯುತ್ತಮ ನಟ ಪ್ರಶಸ್ತಿ ಮಾತ್ರವಲ್ಲದೆ, ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಪ್ರಶಸ್ತಿ ಲಭಿಸಿದೆ. ಈ ಮೂಲಕ ಈ ಸಲದ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡದ ಸಿನಿಮಾಗಳು ಹೊಸ ದಾಖಲೆ ಬರೆದಿವೆ.* ಭಾರತದ 16 ಭಾಷೆಗಳ ಸಿನಿಮಾಗಳಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. * 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ :- ಅತ್ಯುತ್ತಮ ಚಲನಚಿತ್ರ : ಆಟ್ಟಂ (ಮಲಯಾಳ) - ಅತ್ಯುತ್ತಮ ನಿರ್ದೇಶನ: ಸೂರಜ್ ಆರ್.ಬರ್ಜಾತ್ಕಾ(ಊಂಚಾಯ್)- ಅತ್ಯುತ್ತಮ ಮನರಂಜನಾ ಸಿನಿಮಾ : ಕಾಂತಾರ (ಕನ್ನಡ)- ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ : ಪ್ರಮೋದ್ ಕುಮಾರ್ (ಫೌಜಾ)- ಅತ್ಯುತ್ತಮ ನಟ : ರಿಷಬ್ ಶೆಟ್ಟಿ (ಕಾಂತಾರ)- ಅತ್ಯುತ್ತಮ ನಟಿ : ನಿತ್ಯಾಮೆನನ್ (ತಿರುಚಿತ್ರಂಬಲಂ), ಮಾನಸಿ ಪರೇಖ್ (ಕಚ್ ಎಕ್ಸ್‌ಪ್ರೆಸ್)- ಅತ್ಯುತ್ತಮ ಪೋಷಕ ನಟ : ಪವನ್ ರಾಜ್ ಮಲ್ಲೊತ್ರಾ (ಫೌಜಾ)- ಅತ್ಯುತ್ತಮ ಪೋಷಕ ನಟಿ : ನೀನಾ ಗುಪ್ತಾ (ಊಂಚಾಯ್)- ಅತ್ಯುತ್ತಮ ಬಾಲ ಕಲಾವಿದ : ಶ್ರೀಪತ್‌ (ಮಾಲಿಕಪ್ಪುರಂ)- ಅತ್ಯುತ್ತಮ ಛಾಯಾಚಿತ್ರಗ್ರಹಣ : ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್-1)- ಅತ್ಯುತ್ತಮ ಚಿತ್ರಕಥೆ : ಆನಂದ್ ಏಕರ್ಷಿ (ಆಟ್ಟಂ), ಅರ್ಪಿತಾ ಮುಖರ್ಜಿ, ರಾಹುಲ್ ವಿ ಚಿಟ್ಟೆಲಾ (ಗುಲ್‌ಮೊಹರ್)- ಅತ್ಯುತ್ತಮ ನಿರ್ಮಾಣ ವಿನ್ಯಾಸ : ಆನಂದ್ ಆದ್ಯ (ಅಪರಾಜಿತೋ)- ಅತ್ಯುತ್ತಮ ಸಾಹಸ ನಿರ್ದೇಶನ : ಅನ್ಸರಿವ್ (ಕೆಜಿಎಫ್-2)- ಅತ್ಯುತ್ತಮ ಮೇಕಪ್ ಕಲಾವಿದ : ಸೋಮನಾಥ್ ಕುಂದು (ಅಪರಾಜಿತೋ)- ಅತ್ಯುತ್ತಮ ವಸ್ತ್ರ ವಿನ್ಯಾಸ : ನಿಕಿ ಜೋಶಿ (ಕಚ್ ಎಕ್ಸ್‌ಪ್ರೆಸ್)- ಹಾಡುಗಳಿಗೆ ಅತ್ಯುತ್ತಮ ಸಂಗೀತ ನಿರ್ದೇಶನ : ಪ್ರೀತಮ್ (ಬ್ರಹ್ಮಾಸ್ತ್ರ ಭಾಗ 1)- ಹಿನ್ನೆಲೆ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶನ : ಎ.ಆರ್.ರೆಹಮಾನ್ (ಪೊನ್ನಿಯಿನ್ ಸೆಲ್ಸನ್- ǝभा 1)- ಅತ್ಯುತ್ತಮ ಸಾಹಿತ್ಯ :  ನೌಶಾದ್ ಸದ‌ರ್ ಖಾನ್‌ (ಫೌಜಾ)- ಅತ್ಯುತ್ತಮ ಹಿನ್ನೆಲೆ ಗಾಯಕ : ಅರಿಜಿತ್ ಸಿಂಗ್- ಅತ್ಯುತ್ತಮ ಹಿನ್ನೆಲೆ ಗಾಯಕಿ : ಬಾಂಬೆ ಜಯಶ್ರೀ (ಹಾಡು-ಚಾಯುಮ್ ವೆಯಿಲ್, ಚಿತ್ರ-ಸೌದಿ ವೆಲ್ಲಕ್ಕ (C 225/2009)- ಅತ್ಯುತ್ತಮ ನೃತ್ಯಸಂಯೋಜನೆ : ಜಾನಿ ಮಾಸ್ಟರ್ ಮತ್ತು ಸತೀಶ್ ಕೃಷ್ಣನ್ (ತಿರುಚಿತ್ರಂಬಲಂ)- ಅತ್ಯುತ್ತಮ ಧ್ವನಿ ವಿನ್ಯಾಸ : ಆನಂದ್ ಕೃಷ್ಣಮೂರ್ತಿ (ಪೊನ್ನಿಯನ್ ಸೆಲ್ವನ್ -ಭಾಗ 1)- ಅತ್ಯುತ್ತಮ ಸಂಕಲನ : ಮಹೇಶ್ ಭುವನಂದ್ (ಆಟಂ)- ತೀರ್ಪುಗಾರರ ವಿಶೇಷ ಪಶಸ್ತಿ : ಮನೋಜ್ ಬಾಜಪೇಯಿ (ಗುಲ್‌ಮೊಹರ್) ಸಂಜೋಯ್ ಚೌಧರಿ (ಕದಿಕನ್) *  ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗ : - ಅತ್ಯುತ್ತಮ ತೆಲುಗು ಚಿತ್ರ : ಕಾರ್ತಿಕೇಯ 2- ಅತ್ಯುತ್ತಮ ತಮಿಳು ಚಿತ್ರ : ಪೊನ್ನಿಯಿನ್ ಸೆಲ್ವನ್ ಭಾಗ 1- ಅತ್ಯುತ್ತಮ ಪಂಜಾಬಿ ಚಿತ್ರ : ಬಾಘಿ ದಿಧೀ- ಅತ್ಯುತ್ತಮ ಒಡಿಯಾ ಚಿತ್ರ : ದಮನ್- ಅತ್ಯುತ್ತಮ ಮಲಯಾಳ ಚಿತ್ರ : ಸೌದಿ ವೆಲಕ್ಯ CC.225/2009- ಅತ್ಯುತ್ತಮ ಮರಾಠಿ ಚಿತ್ರ : ವಾಲ್ವಿ - ಅತ್ಯುತ್ತಮ ಹಿಂದಿ ಚಿತ್ರ : ಗುಲ್‌ಮೊಹರ್- ಅತ್ಯುತ್ತಮ ಬೆಂಗಾಲಿ ಚಿತ್ರ : ಕಬೇರಿ ಅಂತರಧನ- ಅತ್ಯುತ್ತಮ ಅಸ್ಸಾಮಿ ಚಿತ್ರ : ಎಮುತಿ ಪುತಿ* ನಾನ್-ಫೀಚರ್ ಫಿಲ್ಮ್ ವಿಭಾಗಗಳು : - ಅತ್ಯುತ್ತಮ ನಾನ್-ಫೀಚರ್ ಫಿಲ್ಮ್ – ಸಿದ್ಧಾಂತ್ ಸರಿನ್ ಅವರ ಅಯೆನಾ- ಅತ್ಯುತ್ತಮ ಸಾಕ್ಷ್ಯಚಿತ್ರ – ಮರ್ಮರ್ಸ್ ಆಫ್ ದಿ ಜಂಗಲ್- ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ – ಜೋಶಿ ಬೆನೆಡಿಕ್ಟ್ ಅವರ ಕೊಕೊನಟ್‌ ಟ್ರೀ