*  ಶ್ವೇತಭವನದ ಬಳಿ ರಾಷ್ಟ್ರೀಯ ಭದ್ರತಾ ಪಡೆಗಳ ಮೇಲೆ ನಡೆದ ಗುಂಡಿನ ದಾಳಿಯ ನಂತರ, ಅಮೆರಿಕಾ ದೇಶದ ಭದ್ರತೆಯ ಮೇಲೆ ಹೆಚ್ಚುತ್ತಿರುವ ಅಪಾಯವನ್ನು ಎದುರಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೇರಿಕಾ ಸರ್ಕಾರ ಮತ್ತಷ್ಟು ಕಠಿಣ ವಲಸೆ ನೀತಿಗಳನ್ನು ಜಾರಿಗೆ ತರುವ ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಭದ್ರತೆಗೆ "ಹೆಚ್ಚಿನ ಅಪಾಯ ಉಂಟುಮಾಡಬಹುದಾದ" ರಾಷ್ಟ್ರಗಳೆಂದು ಗುರುತಿಸಲ್ಪಟ್ಟ 19 ದೇಶಗಳ ನಾಗರಿಕರಿಗೆ ಅಮೇರಿಕಾ ಪ್ರವೇಶವನ್ನು ಶಾಶ್ವತವಾಗಿ ನಿರ್ಬಂಧಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.* ಟ್ರಂಪ್ ಆಡಳಿತದ ಹೇಳಿಕೆಯಂತೆ, ಈ ದೇಶಗಳಿಂದ ಬಂದ ವಲಸಿಗರು ಭಯೋತ್ಪಾದನೆ, ಅಕ್ರಮ ಚಟುವಟಿಕೆಗಳು ಮತ್ತು ಅಂತರರಾಷ್ಟ್ರೀಯ ಭದ್ರತಾ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಇದರಿಂದಾಗಿ, ಅಮೆರಿಕಾ ದೇಶಕ್ಕೆ ಅವರ ಪ್ರವೇಶವನ್ನು ಸಂಪೂರ್ಣವಾಗಿ ನಿಲ್ಲಿಸಲು ಹೊಸ ನೀತಿ ರೂಪಿಸಲಾಗಿದೆ.* ಶಾಶ್ವತ ನಿರ್ಬಂಧಕ್ಕೆ ಒಳಗಾದ 19 ರಾಷ್ಟ್ರಗಳು : ಅಫ್ಘಾನಿಸ್ತಾನ್, ಮ್ಯಾನ್ಮಾರ್, ಬುರುಂಡಿ, ಚಾಡ್, ಕಾಂಗೋ, ಗಣರಾಜ್ಯ, ಈಕ್ಟೊರಿಯಲ್ ಗಿನಿ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸೂಡಾನ್, ಯೆಮೆನ್, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ್, ವೆನೆಜುವೆಲಾ ಈ ದೇಶಗಳ ನಾಗರಿಕರಿಗೆ ವೀಸಾ, ಆಶ್ರಯ, ಪ್ರವಾಸ ಅನುಮತಿ, ಶರಣಾರ್ಥಿ ಸ್ಥಾನ ಸೇರಿದಂತೆ ಯಾವುದೇ ರೀತಿಯ ಪ್ರವೇಶವನ್ನು ಶಾಶ್ವತವಾಗಿ ನಿಷೇಧಿಸಲಾಗುತ್ತದೆ. * ನೇತೃತ್ವದ ಉದ್ದೇಶ ಮತ್ತು ಪರಿಣಾಮಗಳು:ಭದ್ರತಾ ಕಾರಣ: ದಾಳಿಗಳು ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಸಂಬಂಧಿಸಿದ ಸಾಧ್ಯ ಅಪಾಯಗಳನ್ನು ತಡೆಗಟ್ಟಲು ಈ ಕ್ರಮ ಅಗತ್ಯವೆಂದು ಸರ್ಕಾರ ಹೇಳಿದೆ.ಪರಿಣಾಮ: ಮಾನವೀಯ ಆಶ್ರಯ, ಶಿಕ್ಷಣ, ಉದ್ಯೋಗಕ್ಕಾಗಿ ಅಮೇರಿಕಾ ಕಡೆ ಮುಖ ಮಾಡುತ್ತಿದ್ದ ಲಕ್ಷಾಂತರ ಜನರಿಗೆ ಈ ನಿರ್ಬಂಧ ಭಾರೀ ಹೊಡೆತವಾಗಲಿದೆ.ಹಲವು ಮಾನವ ಹಕ್ಕು ಸಂಘಟನೆಗಳು ಹಾಗೂ ಅಂತರರಾಷ್ಟ್ರೀಯ ವಲಸೆ ತಜ್ಞರು ಈ ಕ್ರಮವನ್ನು ಮಾನವೀಯತೆಯ ವಿರುದ್ಧದ ನೀತಿಯಾಗಿ ಟೀಕಿಸಿದ್ದಾರೆ.ಈ ನಿರ್ಧಾರ ಜಾಗತಿಕ ಮಟ್ಟದಲ್ಲಿ ರಾಜಕೀಯ, ಭದ್ರತಾ, ಮಾನವೀಯ ಚರ್ಚೆಗೆ ಕಾರಣವಾಗಿದ್ದು, ಅಮೇರಿಕಾದ ವಲಸೆ ನೀತಿಯಲ್ಲಿ ದೊಡ್ಡ ಬದಲಾವಣೆಯಾಗಿ ಪರಿಗಣಿಸಲ್ಪಟ್ಟಿದೆ.