* ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಸಾರ್ವಜನಿಕ ಭದ್ರತಾ ಸಚಿವ ವಾಂಗ್ ಷಿಯಾಂಗ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಏಪ್ರಿಲ್ 26 ರಂದು (ಶುಕ್ರವಾರ) ಮಾತುಕತೆ ನಡೆಸಿದರು.* ಉಭಯ ದೇಶಗಳ ನಡುವಿನ ವಿವಾದಾತ್ಮಕ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಈ ವೇಳೆ ಚರ್ಚೆಗಳು ನಡೆದಿವೆ. ಈ ವಿಷಯಗಳಲ್ಲಿ ಪರಸ್ಪರ ತಪ್ಪು ತಿಳಿವಳಿಕೆ ಮತ್ತು ತಪ್ಪು ಲೆಕ್ಕಾಚಾರಗಳಿಂದ ಆಗುವ ಅಪಾಯಗಳ ಕುರಿತು ಎಚ್ಚರವಹಿಸಬೇಕು ಎಂದು ನಾಯಕರು ಚರ್ಚಿಸಿದ್ದಾರೆ.* ತೈವಾನ್, ದಕ್ಷಿಣ ಚೀನಾ ಸಮುದ್ರ, ವ್ಯಾಪಾರ ಹಾಗೂ ಮಾನವ ಹಕ್ಕು, ರಷ್ಯಾಕ್ಕೆ ಚೀನಾದ ಬೆಂಬಲ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಿವೆ ಎಂದು ತಿಳಿದು ಬಂದಿದೆ.* ಮಾಸ್ಕೋಗೆ ಯಂತ್ರೋಪಕರಣಗಳು ಮತ್ತು ಮೈಕ್ರೋ ಎಲೆಕ್ಟ್ರಾನಿಕ್ಸ್ ಸೇರಿದಂತೆ ಬೀಜಿಂಗ್‌ನ ವಸ್ತುಗಳ ಪೂರೈಕೆಯ ಬಗ್ಗೆ ನಡೆಯುತ್ತಿರುವ ಕಳವಳಗಳನ್ನು ವ್ಯಕ್ತಪಡಿಸಿದರು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ರಕ್ಷಣೆಯನ್ನು ಮತ್ತು ಉಕ್ರೇನ್ ವಿರುದ್ಧದ ಯುದ್ಧವನ್ನು ಹೆಚ್ಚಿಸಲು ಬಳಸುತ್ತಿದ್ದಾರೆ.* ಚೀನಾದ ಅಭಿವೃದ್ಧಿಯನ್ನು ತಡೆಹಿಡಿಯಲು ಪ್ರಯತ್ನಿಸಬೇಡಿ ಮತ್ತು ಚೀನಾದ ಸಾರ್ವಭೌಮತ್ವ, ಭದ್ರತೆ, ಅಭಿವೃದಿಯ ಹಿತಾಸಕ್ತಿಗಳ ಹಸ್ತಕ್ಷೇಪ ಮಾಡಬೇಡಿ ಎಂದು ವಾಂಗ್ ಯಿ ಅವರು ಆಂಟೊನಿ ಬ್ಲಿಂಕನ್ ಗೆ ತಿಳಿಸಿದ್ದಾರೆ.